ಬೆಂಗಳೂರು : ರಾಜ್ಯದಲ್ಲಿ ಯಾವುದೇ ಅನಧಿಕೃತ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಕೆಜೆ ಜಾರ್ಜ್ ನನಗೆ ಗೊತ್ತಿರುವ ಹಾಗೆ ರಾಜ್ಯದಲ್ಲಿ ಯಾವುದೇ ಅನಧಿಕೃತ ಲೋಡ್ ಶೆಡ್ಡಿಂಗ್ ಇಲ್ಲ, ಪರೀಕ್ಷೆ ಹಾಗೂ ಚುನಾವಣೆ ವೇಳೆ ಲೋಡ್ ಶೆಡ್ಡಿಂಗ್ ಮಾಡಿಲ್ಲ ಎಂದರು.
ವಿದ್ಯುತ್ ಕೊರತೆಯಿಂದ ಲೋಡ್ ಶೆಡ್ಡಿಂಗ್ ಮಾಡಿಲ್ಲ, ಮೈಂಟೇನೆನ್ಸ್ಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ನಾನೇನು ಹೊಸದಾಗಿ ಮಂತ್ರಿಯಾಗಿಲ್ಲ ಎಂದರು. ನಿಮ್ಮ ಕೈಯಲ್ಲಿ ಆಗದೇ ಇದ್ದರೆ ಹೆಡ್ ಆಫೀಸ್ ಗೆ ಹೇಳಿ ಎಂದು ಅಧಿಕಾರಿಗಳ ಬಳಿ ಕೆಜೆ ಜಾರ್ಜ್ ಗರಂ ಆಗಿದ್ದಾರೆ. 4 ವರ್ಷ ಸರ್ಕಾರ ನಡೆಸಿದ್ದು ಯಾರು, ನಮ್ಮ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ. 200 ಯೂನಿಟ್ ಒಳಗೆ ಜನರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಎಂದು ಸಚಿವ ಕೆ ಜೆ ಜಾರ್ಜ್ ಹೇಳಿದರು