ಬೆಂಗಳೂರು : ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೇ ತಿಂಗಳ ಗೌರವಧನ ಬಿಡುಗಡೆ ಮಾಡಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಇಲಾಖಾ ವ್ಯಾಪ್ತಿಯಡಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲ 2022-23ನೇ ಸಾಲಿಗೆ ನೇಮಕಗೊಂಡು ಪಾವತಿಸುವ ಸಲುವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಗೌರವಧನ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಬಹುದಾಗಿದ್ದು, 2023-24ನೇ ಸಾಲನ ಆಯವ್ಯಯ ಲೆಕ್ಕಶೀರ್ಷಿಕೆ:2202-03-103-2-01-324ರಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ವೆಚ್ಚವಾಗಿ ಉಳಿಕೆಯಾಗಿರುವ ಒಟ್ಟು ಅನುದಾನದಲ್ಲಿ ಅನುದಾನ ರೂ. 12,88,15,608/-(ಹನ್ನೆರಡು ಕೋಟಿ ಎಂಭತ್ತೆಂಟು ಲಕ್ಷದ ಹದಿನೈದು ಸಾವಿರದ ಆರು ನೂರ ಎಂಟು ರೂಪಾಯಿಗಳು ಮಾತ್ರ)ಗಳ ಅನುದಾನವನ್ನು ಗೌರವಧನಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಖಜಾನೆ-2ರಲ್ಲಿ ಕೆಳಕಂಡ ಷರತ್ತುಗೊಳಪಟ್ಟು ಬಿಡುಗಡೆ ಮಾಡಿ ಆದೇಶಿಸಲಾಗಿದೆ.
2022-23ನೇ ಸಾಲಿನ ವಿವಿಧ ವಿಷಯಗಳಿಗೆ ಸರ್ಕಾರದ ಆದೇಶ/ಸುತ್ತೋಲೆಗಳನ್ವಯ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡು ಪ್ರಾದೇಶಿಕ ಜಂಟಿನಿರ್ದೇಶಕರ ಕಛೇರಿಯ ಅನುಮೋದನೆಗೊಂಡಿರುವ ಉಪನ್ಯಾಸಕರುಗಳಗೆ ಬಿಡುಗಡೆ ಮಾಡಲಾಗಿರುವ ಗೌರವಧನವನ್ನು ಕರ್ತವ್ಯ ನಿರ್ವಹಿಸಿದ ಅವಧಿಗೆ ಮಾತ್ರ ಪಾವತಿಸತಕ್ಕದ್ದು ಹಾಗೂ ಪ್ರಾದೇಶಿಕ జంಟಿ ನಿರ್ದೇಶಕರುಗಳೊಂಡ ಅನುಮೋದನೆಗೊಂಡಿಲ್ಲದ ಉಪನ್ಯಾಸಕರಿಗೆ ಗೌರವಧನ ಪಾವತಿಸಿದ್ದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.