62 ವರ್ಷಗಳ ಬಳಿಕ ದೆಹಲಿ – ಮುಂಬೈಗೆ ಒಂದೇ ದಿನ ‘ಮುಂಗಾರು’ ಪ್ರವೇಶ….!

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಪ್ರವೇಶ ಮಾಡಿದ್ದು, ರೈತಾಪಿ ವರ್ಗ ಆತಂಕಗೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಸುರಿಯುತ್ತಿದ್ದರೆ ಮತ್ತೆ ಹಲವು ಭಾಗದಲ್ಲಿ ಮಳೆ ಇನ್ನೂ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ.

ಇದರ ಮಧ್ಯೆ ಅಪರೂಪದ ಘಟನೆಯೊಂದು ನಡೆದಿದ್ದು, 62 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈಗೆ ಒಂದೇ ದಿನ ಮುಂಗಾರು ಪ್ರವೇಶ ಮಾಡಿದೆ.

ಭಾರತೀಯ ಹವಾಮಾನ ಇಲಾಖೆ ಭಾನುವಾರದಂದು ಈ ಮಾಹಿತಿ ನೀಡಿದ್ದು, 1961ರ ಜೂನ್ 21ರಂದು ಈ ಎರಡು ನಗರಗಳಿಗೆ ಏಕಕಾಲದಲ್ಲಿ ಮುಂಗಾರು ಪ್ರವೇಶಿಸಿತ್ತು. ಇದೀಗ 62 ವರ್ಷಗಳ ಬಳಿಕ ಮತ್ತೆ ಒಂದೇ ದಿನ ಮುಂಗಾರು ಪ್ರವೇಶ ಮಾಡಿದೆ ಎಂದು ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read