ಬೆಂಗಳೂರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ನಮಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ಪ್ರಕರಣ ಲವ್ ಜಿಹಾದ್ ರೂಪ ಪಡೆದಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಅನ್ನು ಬಿಜೆಪಿ ದೂಷಿಸಿದೆ. ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡ ತಕ್ಷಣ ಕರ್ನಾಟಕಕ್ಕೆ ತೆರಳಲಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾಹಿತಿ ನೀಡಿದರು.
ಯುವತಿಗೆ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು, ರಾಜೀವ್ ಎಂದು ಪರಿಚಯಿಸಿಕೊಂಡ 32 ವರ್ಷದ ವ್ಯಕ್ತಿಯೊಂದಿಗೆ ಯುವತಿ ಸ್ನೇಹ ಬೆಳೆಸಿದ್ದಳು. ನಂತರ ಈತನ ನಿಜವಾದ ಹೆಸರು ಒಮರ್ ಫಾರೂಕ್ ಮತ್ತು ಅವನು ಅಸ್ಸಾಂ ನಿವಾಸಿ ಎಂದು ಎಂದು ಯುವತಿಗೆ ಗೊತ್ತಾಗಿದೆ. ಆದರೆ ಯುವತಿ ಆತನಿಂದ ದೂರ ಇರಲು ಯತ್ನಿಸಿದಾದ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾಳೆ. ಅವನಿಂದ ದೂರವಿರಲು ಪ್ರಾರಂಭಿಸಿದಾಗ ಬೆದರಿಕೆ ಮತ್ತು ದೈಹಿಕವಾಗಿ ಹಿಂಸಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮದುವೆಯ ಭರವಸೆಯ ಮೇರೆಗೆ ಆರೋಪಿಯು ದೈಹಿಕ ಸಂಬಂಧ ಬೆಳೆಸಿದ್ದನು. ನಂತರ ಯುವತಿ ಜೊತೆಗಿದ್ದ ಖಾಸಗಿ ಕ್ಷಣವನ್ನು ಚಿತ್ರೀಕರಿಸಿ ವೈರಲ್ ಮಾಡುವ ಬೆದರಿಕೆಯೊಡ್ಡಿದ್ದನು ಎಂದು ಯುವತಿ ಆರೋಪಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡ ತಕ್ಷಣ ಕರ್ನಾಟಕಕ್ಕೆ ತೆರಳಲಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾಹಿತಿ ನೀಡಿದರು.ನಾವು ಈ “ಲವ್ ಜಿಹಾದ್” ಮನಸ್ಥಿತಿಯನ್ನು ಹತ್ತಿಕ್ಕಲಿದ್ದೇವೆ ಎಂದು ಮಧ್ಯಪ್ರದೇಶ ಸರ್ಕಾರದ ವಕ್ತಾರರೂ ಆಗಿರುವ ಮಿಶ್ರಾ ಶುಕ್ರವಾರ ಹೇಳಿದ್ದಾರೆ.ಲವ್ ಜಿಹಾದ್ ಮೂಲಕ ಹಿಂದೂ ಮಹಿಳೆಯರನ್ನು ವಿವಾಹದ ಮೂಲಕ ಇಸ್ಲಾಂಗೆ ಮತಾಂತರಗೊಳ್ಳಲು ಮುಸ್ಲಿಂ ಪುರುಷರು ಪಿತೂರಿ ನಡೆಸುತ್ತಿದ್ದಾರೆ ಎಂದು ಬಲಪಂಥೀಯ ಕಾರ್ಯಕರ್ತರು ಆರೋಪಿಸಿದ್ದಾರೆ.