ನವದೆಹಲಿ : ವಿದ್ಯುತ್ ಬಳಕೆಗೆ ಹಗಲು ವೇಳೆ ಶೇಕಡ 20ರಷ್ಟು ರಿಯಾಯಿತಿ ನೀಡಿ ರಾತ್ರಿ ವೇಳೆ ಶೇಕಡ 20ರಷ್ಟು ಹೆಚ್ಚು ಶುಲ್ಕ ವಿಧಿಸುವ ಹೊಸ ನೀತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಏಪ್ರಿಲ್ 1, 2025ರಿಂದ ವಿದ್ಯುತ್ ಬೆಲೆ ಶೇ.20 ರಷ್ಟು ಹೆಚ್ಚಳವಾಗಲಿದೆ.
ಕೇಂದ್ರ ವಿದ್ಯುತ್ ಸಚಿವಾಲಯವು ಟೈಮ್ ಆಫ್ ಡೇ (ಟಿಒಡಿ) ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದೆ.ಆಯಾ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿಗದಿಪಡಿಸಿದ ಎಂಟು ಗಂಟೆಗಳ ಸೌರ ಸಮಯದಲ್ಲಿ, ದರವು ಸಾಮಾನ್ಯಕ್ಕಿಂತ 10-20% ಕಡಿಮೆ ಇರುತ್ತದೆ, ಆದರೆ ರಾತ್ರಿಯ ಗರಿಷ್ಠ ಸಮಯದಲ್ಲಿ, ಸುಂಕವು ಅದಕ್ಕೆ ಅನುಗುಣವಾಗಿ ಹೆಚ್ಚಾಗುತ್ತದೆ ಎಂದು ವಿದ್ಯುತ್ ಸಚಿವಾಲಯದ ಹೇಳಿಕೆ ತಿಳಿಸಿದೆ. ಹಕರಿಗೆ 1 ಏಪ್ರಿಲ್ 2024 ರಿಂದ ಹೊಸ ದರ ಅನ್ವಯವಾಗುತ್ತದೆ. ರೈತರನ್ನು ಹೊರತುಪಡಿಸಿ ಉಳಿದ ಎಲ್ಲಾ ಗ್ರಾಹಕರಿಗೆ, ನಿಯಮವು 1 ನೇ ಏಪ್ರಿಲ್ 2025 ರಿಂದ ಅನ್ವಯಿಸುತ್ತದೆ.
ಎರಡು ವರ್ಷಗಳಲ್ಲಿ ಕೇಂದ್ರದಿಂದ ಹೊಸ ರೀತಿ ಜಾರಿಯಾಗುವ ಸಾಧ್ಯತೆ ಇದೆ. ಹಗಲು ಹೊತ್ತಿನಲ್ಲಿ ಕಡಿಮೆ ದರ ಮತ್ತು ರಾತ್ರಿ ವೇಳೆ ಹೆಚ್ಚು ದರ ಅನ್ವಯವಾಗುವ ನೀತಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ. ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಣಿಜ್ಯ ಬಳಕೆದಾರರಿಗೆ 2024ರ ಏಪ್ರಿಲ್ 1ರಿಂದ ಮತ್ತು ಗೃಹಬಳಕೆದಾರರಿಗೆ 2025 ಏಪ್ರಿಲ್ 1ರಿಂದ ಈ ದರ ನಿಯಮ ಜಾರಿಗೆ ಬರಲಿದೆ. ಕಡಿಮೆ ಪ್ರಮಾಣದ ವಿದ್ಯುತ್ ಬಳಸುವ ಹಗಲು ಹೊತ್ತಿನಲ್ಲಿ ಶುಲ್ಕ ಕಡಿತವಾಗುತ್ತದೆ. ಹೆಚ್ಚು ಬೇಡಿಕೆಯ ವಿದ್ಯುತ್ ಬಳಕೆಯ ರಾತ್ರಿ ಹೊತ್ತಲ್ಲಿ ವಿದ್ಯುತ್ ದರ ಹೆಚ್ಚಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.ಆಯಾ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿಗದಿಪಡಿಸಿದ ಎಂಟು ಗಂಟೆಗಳ ಸೌರ ಸಮಯದಲ್ಲಿ, ದರವು ಸಾಮಾನ್ಯಕ್ಕಿಂತ 10-20% ಕಡಿಮೆ ಇರುತ್ತದೆ, ಆದರೆ ರಾತ್ರಿಯ ಗರಿಷ್ಠ ಸಮಯದಲ್ಲಿ, ಸುಂಕವು ಅದಕ್ಕೆ ಅನುಗುಣವಾಗಿ ಹೆಚ್ಚಾಗುತ್ತದೆ ಎಂದು ವಿದ್ಯುತ್ ಸಚಿವಾಲಯದ ಹೇಳಿಕೆ ತಿಳಿಸಿದೆ.