ಭಾನುವಾರ ನಾಪತ್ತೆಯಾದ ಟೈಟಾನಿಕ್ ಜಲಾಂತರ್ಗಾಮಿ ವಿಚಾರ ದುರಂತದಲ್ಲಿ ಕೊನೆಗೊಂಡಿದೆ. ಇದೇ ವೇಳೆ, ಟೈಟಾನಿಕ್ ಜಲಾಂತರ್ಗಾಮಿಯ ಭವಿಷ್ಯದ ಕುರಿತು ಅಂದಾಜು ಮಾಡಬಹುದಾದಷ್ಟು ಸಂಬಂಧವಿರುವ ’ದಿ ಸಿಂಪ್ಸನ್ಸ್’ ಕಾರ್ಟೂನ್ ಶೋ ಒಂದರ ವಿಡಿಯೋ ವೈರಲ್ ಆಗಿದೆ.
2006ರಲ್ಲಿ ಬಿತ್ತರಗೊಂಡ ದಿ ಸಿಂಪ್ಸನ್ಸ್ ಕಾರ್ಟೂನ್ನ 17ನೇ ಸೀಸನ್ ನಲ್ಲಿ ಟೈಟಾನಿಕ್ ದುರಂತವನ್ನು ನೆನಪಿಸುವ ದೃಶ್ಯಾವಳಿಗಳಿವೆ. ಆ ಸೀಸನ್ನ 10ನೇ ಸಂಚಿಕೆಯಲ್ಲಿ, ’ಸಿಂಪ್ಸನ್ಸ್ ಟಿಡ್ಸ್’, ಹೋಮರ್ ಪಾತ್ರಧಾರಿ ತನ್ನ ಜೈವಿಕ ತಂದೆಯೆಂದು ನಂಬಿದ ವ್ಯಕ್ತಿಯೊಂದಿಗೆ ನೀರಿನಾಳದ ಅನ್ವೇಷಣೆಗೆ ಮುಂದಾಗುತ್ತಾನೆ.
ಹೀಗೆ ನೀರಿನಾಳಕ್ಕೆ ಹೋದ ಜಲಾಂತರ್ಗಾಮಿಗಳಲ್ಲಿ ಒಂದು ಸಮುದ್ರದಾಳದಲ್ಲಿ ಸಿಲುಕಿಕೊಂಡು ಹೇಗೆ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಕಾರ್ಟೂನ್ನಲ್ಲಿ ನೋಡಬಹುದಾಗಿದೆ.
“ದಿ ಸಿಂಪ್ಸನ್ಸ್ ನಿಜಕ್ಕೂ ಟೈಟಾನಿಕ್ ಜಲಾಂತರ್ಗಾಮಿಯಂಥ ಪರಿಸ್ಥಿತಿಯನ್ನು ಅಂದಾಜು ಮಾಡಿದೆ. ಆ ಸಂದರ್ಭದಲ್ಲಿ ಜಲಾಂತರ್ಗಾಮಿಯಲ್ಲಿ ಆಮ್ಲಜನಕ ಸಂಪೂರ್ಣವಾಗಿ ಖಾಲಿಯಾಗಬಹುದು. ಇದು ನಿಜಕ್ಕೂ ಭಯ ಮೂಡಿಸುತ್ತದೆ,” ಎಂದು ಕ್ಯಾಪ್ಷನ್ ಕೊಟ್ಟು, ಸಿಂಪ್ಸನ್ಸ್ ಶೋನ ಈ ತುಣುಕನ್ನು ಶೇರ್ ಮಾಡಲಾಗಿದೆ.
ನ್ಯೂಫೌಂಡ್ಲ್ಯಾಂಡ್ಸ್ ಕರಾವಳಿ ಬಳಿ ಟೈಟಾನಿಕ್ ಹಡಗಿನ ಅವಶೇಷಗಳ ಅಧ್ಯಯನಕ್ಕೆಂದು ಇಳಿದ ಟೈಟಾನ್ ಜಲಾಂತರ್ಗಾಮಿಯು ಮೇಲ್ಮೈನಲ್ಲಿದ್ದ ನಿಯಂತ್ರಣ ಕೇಂದ್ರದೊಂದಿಗೆ ಸಂಪೂರ್ಣ ಸಂಪರ್ಕ ಕಡಿದುಕೊಂಡಿತ್ತು. ಇದರಲ್ಲಿದ್ದ ಐವರೂ ಕೂಡ ಸಾವನ್ನಪ್ಪಿದ್ದಾರೆ.