ಕಾರವಾರ/ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ಖಂಡಿಸಿ ವಾಣಿಜ್ಯೋದ್ಯಮ ಸಂಘಟನೆಗಳು ರಾಜ್ಯಾದ್ಯಂತ ಇಂದು ಬಂದ್ ಗೆ ಕರೆ ಕೊಟ್ಟಿದ್ದು, ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ವಿದ್ಯುತ್ ದರ ಏರಿಕೆ ಖಂಡಿಸಿ ಇಂದು ಹುಬ್ಬಳ್ಳಿ-ಧಾರವಾಡ ಬಂದ್ ಗೆ ಕರೆ ಕೊಡಲಾಗಿದ್ದು, ಬಂದ್ ಗೆ ಬೆಂಬಲ ಸೂಚಿಸಿ ವರ್ತಕರು, ಎಪಿಎಂಸಿ, ಜವಳಿ ಉದ್ಯಮ, ಬಟ್ಟೆ ಅಂಗಡಿಗಳು, ಸ್ಟೇಷನರಿ, ಹೋಟೆಲ್ ಮಾಲೀಕರು, ಬೇಕರಿ, ಅಂಗಡಿ, ಹಾರ್ಡ್ ವೇರ‍್ ವ್ಯಾಪಾರಿಗಳ ಸಂಘ, ಕೈಗಾರಿಕಾ ಪ್ರದೇಶದ ಉದ್ಯಮಿಗಳು ಬೆಂಬಲ ವ್ಯಕ್ತಪಡಿಸಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವರದಲ್ಲಿಯೂ ವಾಣಿಜ್ಯೋದ್ಯಮಿಗಳು ಬಂದ್ ಗೆ ಕರೆ ಕೊಟ್ಟಿದ್ದು, ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಕಾರವಾರ ನಗರ ಬಂದ್ ನಿಂದಾಗಿ ಬಿಕೋ ಎನ್ನುತ್ತಿದೆ.
ಇನ್ನೊಂದೆಡೆ ಬೆಳಗಾವಿ, ವಿಜಯ ನಗರ ಜಿಲ್ಲೆಗಳಲ್ಲಿಯೂ ಬಂದ್ ಗೆ ಬೆಂಬಲ ವ್ಯಕ್ತವಾಗಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ವರ್ತಕರು ಬಂದ್ ಗೆ ಬೆಂಬಲ ನೀಡಿದ್ದಾರೆ.