ಓಂ ರೌತ್ ನಿರ್ದೇಶನದ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್ ಚಿತ್ರ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಚಿತ್ರದ ಕಲೆಕ್ಷನ್ ತಗ್ಗುತ್ತಿದೆ.
ಸದ್ಯ, ಆದಿಪುರುಷ್ ಚಿತ್ರ ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ತುರ್ತು ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ತಾರಾ ವಿಟಾಸ್ತ ಗಂಜು ಮತ್ತು ಅಮಿತ್ ಮಹಾಜನ್ ಅವರ ಪೀಠವು ಈ ಈ ವಿಚಾರಣೆಯನ್ನು ತುರ್ತಾಗಿ ನಡೆಸುವ ಅಗತ್ಯವಿಲ್ಲ. ಹಾಗಾಗಿ ವಿಚಾರಣೆಯನ್ನು ಜೂನ್ 30 ಕ್ಕೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ. ಆದಿಪುರುಷ್’ ಸಿನಿಮಾ ಬಿಡುಗಡೆ ಆದ ಬಳಿಕ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ದೆಹಲಿ ಹೈಕೋರ್ಟ್ಗೆ ಸ್ವಯಂ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಆದಿಪುರುಷ್ ಹಲವಾರು ವಿವಾದಾತ್ಮಕ ದೃಶ್ಯಗಳನ್ನು ಹೊಂದಿದೆ, ಅವುಗಳಲ್ಲಿ ಕೆಲವು ಇತರ ದೇಶಗಳೊಂದಿಗಿನ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಅರ್ಜಿದಾರರಾದ ಹಿಂದೂ ಸೇನಾ ನ್ಯಾಯಾಲಯಕ್ಕೆ ತಿಳಿಸಿತ್ತು.ಚಿತ್ರವು ಈಗಾಗಲೇ ಬಿಡುಗಡೆಯಾಗಿದೆ, ಆದ್ದರಿಂದ ಈ ವಿಷಯದಲ್ಲಿ ಯಾವುದೇ ತುರ್ತು ಇಲ್ಲ ಎಂದು ನ್ಯಾಯಪೀಠ ವಾದಿಸಿತು. ಪ್ರಭಾಸ್-ಕೃತಿ ಸನೋನ್ ಅಭಿನಯದ ಈ ಚಿತ್ರವು ಐದನೇ ದಿನದಂದು ಕೇವಲ 10.80 ಕೋಟಿ ರೂ.ಗಳನ್ನು ಗಳಿಸಿದೆ ಎನ್ನಲಾಗಿದೆ.