alex Certify ಖರ್ಜೂರದ ಚಹಾ ಸವಿದಿದ್ದೀರಾ…..? ಇದರಿಂದ ಆರೋಗ್ಯಕ್ಕೆ ಇದೆ ಪ್ರಯೋಜನ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖರ್ಜೂರದ ಚಹಾ ಸವಿದಿದ್ದೀರಾ…..? ಇದರಿಂದ ಆರೋಗ್ಯಕ್ಕೆ ಇದೆ ಪ್ರಯೋಜನ…..!

ಭಾರತೀಯರ ಜೀವನಶೈಲಿಯ ಪ್ರಮುಖ ಭಾಗವೆಂದರೆ ಚಹಾ. ನೀವು ಈವರೆಗೆ ಅನೇಕ ರೀತಿಯ ಚಹಾವನ್ನು ಕುಡಿದಿರಬೇಕು. ಗ್ರೀನ್ ಟೀ, ಬ್ಲ್ಯಾಕ್ ಟೀ, ದಾಸವಾಳ ಟೀ, ಹಾಲು ಬೆರೆಸಿದ ಚಹಾ ಹೀಗೆ ದೊಡ್ಡ ಪಟ್ಟಿಯೇ ಇದೆ. ಆದರೆ ಎಂದಾದರೂ ಖರ್ಜೂರದ ಚಹಾ ಸವಿದಿದ್ದೀರಾ? ಈ ಚಹಾವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಖರ್ಜೂರದ ಚಹಾವನ್ನು ಕುಡಿಯುವುದರಿಂದ ಸಕ್ಕರೆಯ ಸೇವನೆ ಪ್ರಮಾಣವನ್ನು ಕಡಿಮೆ ಮಾಡಬಹುದು.

ಕೆಲವರು ಸಕ್ಕರೆ ತಿನ್ನುವುದನ್ನು ತಪ್ಪಿಸಲು ಸಕ್ಕರೆಯ ಬದಲಿಗೆ ಕೃತಕ ಸಿಹಿಕಾರಕವನ್ನು ಬಳಸುತ್ತಾರೆ. ಆದರೆ ಕೃತಕ ಸಿಹಿಕಾರಕವು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಆದರೆ ಖರ್ಜೂರದ ಚಹಾಕ್ಕೆ ಸಕ್ಕರೆಯಅಗತ್ಯವಿಲ್ಲ. ಖರ್ಜೂರದಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿದೆ. ಅದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಜೊತೆಗೆ ಬಿಪಿಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಒಟ್ಟಾರೆ ಹೃದಯದ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.ಖರ್ಜೂರದಲ್ಲಿಯೂ ಮೆಗ್ನೀಸಿಯಮ್ ಕಂಡುಬರುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಈ ಕಾರಣದಿಂದಾಗಿ, ಋತುಮಾನದ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.ಖರ್ಜೂರವು ಬೀಟಾ ಡಿ-ಗ್ಲುಕನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ದೇಹದೊಳಗೆ ಎಂಟಿ ಟ್ಯೂಮರ್ ಚಟುವಟಿಕೆಯನ್ನು ಉತ್ತೇಜಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಖರ್ಜೂರದಲ್ಲಿರುವ ಉತ್ಕರ್ಷಣ ನಿರೋಧಕ ಅಂಶವು ಸ್ವತಂತ್ರ ರಾಡಿಕಲ್‌ಗಳ ಚಟುವಟಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಖರ್ಜೂರದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ತಾಮ್ರ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ಮೂಳೆಯ ಆರೋಗ್ಯದ ಬೆಳವಣಿಗೆಗೆ ಸಹಾಯ ಮಾಡುತ್ತವೆ.ಖರ್ಜೂರದ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸಬಹುದು. ಏಕೆಂದರೆ ಖರ್ಜೂರದಲ್ಲಿ ನಾರಿನಂಶವಿದ್ದು ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಖರ್ಜೂರದ ಚಹಾವನ್ನು ತಯಾರಿಸುವುದು ಹೇಗೆ?

ಬೇಕಾಗುವ ಸಾಮಗ್ರಿ: 2 ಚಮಚ ಚಹಾಪುಡಿ, 2 ರಿಂದ 4 ಖರ್ಜೂರ, ಎರಡು ಕಪ್ ಹಾಲು, ಒಂದು ಕಪ್ ನೀರು

ಮಾಡುವ ವಿಧಾನ: ಮೊದಲು ಪಾತ್ರೆಯೊಂದರಲ್ಲಿ ನೀರು ಮತ್ತು ಹಾಲನ್ನು ಹಾಕಿ ಕುದಿಸಿ. ಖರ್ಜೂರದ ಬೀಜಗಳನ್ನು ತೆಗೆದು ಅದರಲ್ಲಿ ಹಾಕಿ. ಅದು ಸಿಹಿಯನ್ನೆಲ್ಲ ಬಿಡುವವರೆಗೆ ಕುದಿಸಿ. ನಂತರ ಸೋಸಿಕೊಂಡು ಬಿಸಿ ಬಿಸಿ ಖರ್ಜೂರದ ಚಹಾವನ್ನು ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...