alex Certify ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವ ಪೋಷಕರು ಓದಲೇಬೇಕು ಈ ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವ ಪೋಷಕರು ಓದಲೇಬೇಕು ಈ ಸುದ್ದಿ…!

ವಾಹನ ಚಾಲನೆ ಮಾಡಲು ನಿಗದಿತ ವಯೋಮಿತಿ ಇದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಚಾಲನಾ ಪರವಾನಗಿ ಪತ್ರ ನೀಡಲಾಗುತ್ತದೆ. ಇದರ ಮಧ್ಯೆಯೂ ಹಲವು ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಮಾಡಿಕೊಡುತ್ತಾರೆ. ಅಂಥವರು ಈ ಸುದ್ದಿಯನ್ನು ಓದಲೇಬೇಕು.

ಹೌದು, ವ್ಯಕ್ತಿಯೊಬ್ಬರ ಅಪ್ರಾಪ್ತ ಪುತ್ರ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನವನ್ನು ಓಡಿಸಿದ ಕಾರಣಕ್ಕೆ ಆತನ ತಂದೆಗೆ ಬರೋಬ್ಬರಿ 20 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ. ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಕಳ್ಳಿಗದ್ದೆ ಗ್ರಾಮದ ಪ್ರಮೋದ್ ಎಂಬವರ 17 ವರ್ಷದ ಮಗ ಹೆಲ್ಮೆಟ್ ಧರಿಸದೆ ಸೋಮವಾರದಂದು ತೀರ್ಥಹಳ್ಳಿ ಪಟ್ಟಣದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ. ಆತನನ್ನು ಹಿಡಿದ ಪೊಲೀಸರು ವಾಹನ ಚಲಾಯಿಸಲು ಅವಕಾಶ ನೀಡಿದ ಆತನ ತಂದೆಯ ವಿರುದ್ಧವೂ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ತೀರ್ಥಹಳ್ಳಿ ಜೆಎಂಎಫ್ ನ್ಯಾಯಾಲಯವು, ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ್ದಕ್ಕೆ ತಂದೆ ಪ್ರಮೋದ್ ಗೆ 20,000 ರೂಪಾಯಿ ದಂಡ ವಿಧಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...