ಕೋಲಾರ: ಇಬ್ಬರು ಮಕ್ಕಳನ್ನು ನೇಣಿಗೆ ಹಾಕಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ಉಪ್ಪುಕುಂಟೆ ಗ್ರಾಮದ ಮನೆಯಲ್ಲಿ ನಡೆದಿದೆ.
ಪ್ರೀತಂ ಗೌಡ(9), ನಿಶಿತಾತ ಗೌಡ(6) ಜೊತೆ ಸುಗುಣ(36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ವರ್ಷಗಳ ಹಿಂದೆ ಮುರಳಿಯೊಂದಿಗೆ ಸುಗುಣ ಮದುವೆಯಾಗಿತ್ತು. ಸುಗುಣ ಕೋಲಾರದ ಸರ್ಕಾರಿ ಬಸ್ ಡಿಪೋ ಮೆಕಾನಿಕ್ ಆಗಿದ್ದು, ಮುರುಳಿ ಬಸ್ ಡಿಪೋ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.