ತೆಲಂಗಾಣದಲ್ಲಿ (Telangana) ಘೋರ ದುರಂತವೊಂದು ಸಂಭವಿಸಿದ್ದು, ಮಹಿಳೆ(Women)ಯೊಬ್ಬಳು ತನ್ನ ಅವಳಿ ಮಕ್ಕಳನ್ನು ಕಟ್ಟಡದ 8 ನೇ ಮಹಡಿಯಿಂದ ಎಸೆದು ಬಳಿಕ ತಾನೂ ಆತ್ಮಹತ್ಯೆ(Suside) ಮಾಡಿಕೊಂಡಿರುವ ಘಟನೆ ತೆಲಂಗಾಣದ ಗಾಂಧಿನಗರದಲ್ಲಿ ನಡೆದಿದೆ.
ವರದಕ್ಷಿಣ ಕಿರುಕುಳ ಹಿನ್ನೆಲೆಯಲ್ಲಿ ಮಹಿಳೆ ಕಟ್ಟಡದಿಂದ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಮಹಿಳೆ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ನಮಗೆ ಮಾಹಿತಿ ದೊರೆತ ಕೂಡಲೇ, ನಾವು ಸ್ಥಳಕ್ಕೆ ತಲುಪಿದ್ದೇವೆ ಆದರೆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಗಾಂಧಿ ನಗರ ಪೊಲೀಸರು ತಿಳಿಸಿದ್ದಾರೆ. “ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ವರದಕ್ಷಿಣೆಗಾಗಿ ಪತಿ ಮತ್ತು ಅತ್ತೆ ಕಿರುಕುಳದಿಂದಾಗಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 ಬಿ (ವರದಕ್ಷಿಣೆ ಸಾವು), 498 ಎ (ಕೌಟುಂಬಿಕ ಹಿಂಸೆ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ (1969) ಸೆಕ್ಷನ್ 3, 4 ಮತ್ತು 6 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪತಿಯನ್ನು ವಶಕ್ಕೆ ಪಡೆದಿದ್ದಾರೆ.