
ಒಡಿಶಾದ ನುವಾಪಾಡಾ ಜಿಲ್ಲೆಯ ಜಮೀನೊಂದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿ ಬೆಲೆಯ ಮಾವಿನ ಹಣ್ಣುಗಳು ಕಳ್ಳತನವಾಗಿದ್ದು, ಫಾರ್ಮ್ ಮಾಲೀಕರು ಹಣ್ಣಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಸ್ವಲ್ಪ ಸಮಯದ ನಂತರ ಘಟನೆ ನಡೆದಿದೆ.
ರೈತ ಲಕ್ಷ್ಮೀನಾರಾಯಣ ಅವರು ತಮ್ಮ ಜಮೀನಿನಲ್ಲಿ 38 ಕ್ಕೂ ಹೆಚ್ಚು ಬಗೆಯ ಮಾವುಗಳನ್ನು ಬೆಳೆಸಿದ್ದಾರೆ. ತಮ್ಮ ತೋಟದಲ್ಲಿರುವ ಮಾವಿನಹಣ್ಣಿನ ಅಸಾಧಾರಣ ಮೌಲ್ಯವನ್ನು ತಿಳಿದು ಅವರು ಭಾರಿ ಉತ್ಸಾಹದಿಂದ ಹಣ್ಣಿನ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಲಕ್ಷ್ಮೀನಾರಾಯಣ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಶೇಷವಾಗಿ ಅಮೂಲ್ಯವಾದ ಮಾವಿನ ಮರದ ಫೋಟೋವನ್ನು ಹೆಮ್ಮೆಯಿಂದ ಪೋಸ್ಟ್ ಮಾಡಿದ ಒಂದೇ ದಿನದಲ್ಲಿ ಅವರ ಜಮೀನಿನಲ್ಲಿದ್ದ ಬೆಲೆಬಾಳುವ ನಾಲ್ಕು ಮಿಯಾಜಾಕಿ ಮಾವಿನ ಹಣ್ಣುಗಳು ಕಳ್ಳತನವಾಗಿದೆ.