ವಿವಿ ಕ್ಯಾಂಪಸ್‌ ನಲ್ಲೇ ವಿದ್ಯಾರ್ಥಿ ಹತ್ಯೆ; ಗೆಳತಿಯೊಂದಿಗೆ ದುರ್ವತನೆ ತೋರಿದ್ದನ್ನು ವಿರೋಧಿಸಿದ್ದಕ್ಕೆ ಕೃತ್ಯ

ದೆಹಲಿ ವಿಶ್ವವಿದ್ಯಾನಿಲಯದ ಸೌತ್ ಕ್ಯಾಂಪಸ್‌ನಲ್ಲಿ ಭಾನುವಾರ ನಡೆದ ದುರಂತ ಘಟನೆಯಲ್ಲಿ, ನಿಖಿಲ್ ಚೌಹಾಣ್ ಎಂಬ ವಿದ್ಯಾರ್ಥಿಯನ್ನು ಹಗಲಿನ ವೇಳೆಯೇ ಇಬ್ಬರು ಬರ್ಬರವಾಗಿ ಇರಿದು ಕೊಂದಿದ್ದಾರೆ.

ಘಟನೆ ನಡೆದ ಪ್ರದೇಶದ ಸಿಸಿ ಕ್ಯಾಮೆರಾ ದೃಶ್ಯಗಳು ಹೊರಗೆ ಕಾಣಿಸಿಕೊಂಡಿದ್ದು, ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಹೋಗುತ್ತಿರುವುದನ್ನ ಕಾಣಬಹುದು. ನಿಖಿಲ್ ಚೌಹಾಣ್‌ಗೆ ಚಾಕುವಿನಿಂದ ಇರಿದ ನಂತರ ಆರೋಪಿಗಳು ಪರಾರಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ದೆಹಲಿ ಪೊಲೀಸರು ಕ್ಷಿಪ್ರವಾಗಿ ಕ್ರಮ ಕೈಗೊಂಡಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಘಟನೆಯ ಕುರಿತು ಪೊಲೀಸರು ವಿವರವಾದ ಹೇಳಿಕೆ ನೀಡಿದ್ದು ಬಂಧಿತರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನೈಋತ್ಯ ದೆಹಲಿಯ ಡಿಸಿಪಿ ಮನೋಜ್ ಸಿ ಮಾತನಾಡಿ, ಪೊಲೀಸರು ಕೃತ್ಯ ನಡೆದ ಸ್ಥಳ ತಲುಪಿದಾಗ ಮೃತ ವ್ಯಕ್ತಿ ನಿಖಿಲ್ ಚೌಹಾಣ್ ಎಂದು ತಿಳಿದುಬಂತು. ಆತ ಸ್ಕೂಲ್ ಆಫ್ ಓಪನ್ ಲರ್ನಿಂಗ್‌ನ ಮೊದಲ ವರ್ಷದ ವಿದ್ಯಾರ್ಥಿ ಎಂದು ಕಂಡುಬಂದಿದೆ. ಹೆಚ್ಚಿನ ತನಿಖೆಯ ವೇಳೆ ಒಂದು ವಾರದ ಹಿಂದೆ ನಿಖಿಲ್ ಚೌಹಾಣ್‌, ರಾಹುಲ್ ಮತ್ತು ಯಶ್ ಜೊತೆ ಜಗಳ ಮಾಡಿಕೊಂಡಿದ್ದರು ಎಂದು ಗೊತ್ತಾಯಿತು.

ಇದರಿಂದಾಗಿ ರಾಹುಲ್, ಯಶ್ ಮತ್ತು ಇತರರು ಸೇಡು ತೀರಿಸಿಕೊಳ್ಳಲು ವಿವಿ ಕ್ಯಾಂಪಸ್ ಗೆ ಬಂದಿದ್ದರು. ಅವರು ನಿಖಿಲ್ ಚೌಹಾಣ್‌ಗೆ ಚಾಕುವಿನಿಂದ ಇರಿದಿದ್ದರು. ನಾವು ಇಬ್ಬರನ್ನು ಬಂಧಿಸಿದ್ದೇವೆ. ಅವರ ಹೆಸರು ರಾಹುಲ್ ಮತ್ತು ಅವನ ಸಹಚರ ಹರೂನ್. ಇತರರನ್ನು ಗುರುತಿಸಿದ್ದು ಅವರನ್ನೂ ಬಂಧಿಸುತ್ತೇವೆ ಎಂದರು.

ಪ್ರಾಥಮಿಕ ತನಿಖೆಯ ಪ್ರಕಾರ ಪಶ್ಚಿಮ ವಿಹಾರ್‌ನ 19 ವರ್ಷದ ನಿಖಿಲ್ ಚೌಹಾನ್ ತನ್ನ ಗೆಳತಿಯೊಂದಿಗೆ ಆರೋಪಿಗಳು ದುರ್ವರ್ತನೆ ತೋರಿದ್ದನ್ನ ವಿರೋಧಿಸಿದ್ದಕ್ಕೆ ಮಾರಣಾಂತಿಕವಾಗಿ ಇರಿದಿದ್ದರು.

https://twitter.com/sanuj42/status/1670652244616966145?ref_src=twsrc%5Etfw%7Ctwcamp%5Etweetembed%7Ctwterm%5E1670652244616966145%7

https://twitter.com/ANI/status/1670673614012829697?ref_src=twsrc%5Etfw%7Ctwcamp%5Etweetembed%7Ctwterm%5E1670673614012829697%7Ctwgr%5Ea00d308988b0787c7082dd84121c39cb82d91ad5%7Ctwcon%5Es1_&ref_url=https%3A%2F%2Fwww.freepressjournal.in%2Findia%2Fdelhi-police-arrests-2-accused-in-connection-to-stabbing-student-to-death-in-du-campus

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read