ಲಂಡನ್ ನಲ್ಲಿ ಚಾಕುವಿನಿಂದ ಇರಿದು ಭಾರತೀಯ ಮೂಲದ ವ್ಯಕ್ತಿ ಹತ್ಯೆ, ಮೂರು ದಿನಗಳಲ್ಲಿ 2ನೇ ಘಟನೆ

 ಲಂಡನ್: ಯುನೈಟೆಡ್ ಕಿಂಗ್‌ ಡಮ್‌ ನಲ್ಲಿ ಓದುತ್ತಿದ್ದ ಹೈದರಾಬಾದ್‌ನ 27 ವರ್ಷದ ಮಹಿಳೆಯನ್ನು ಲಂಡನ್‌ ನಲ್ಲಿರುವ ಆಕೆಯ ವಸತಿಗೃಹದಲ್ಲಿ ಬ್ರೆಜಿಲಿಯನ್ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದ ಎರಡು ದಿನಗಳ ನಂತರ, ಶುಕ್ರವಾರ ಲಂಡನ್‌ ನಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

37 ವರ್ಷದ ಅರವಿಂದ್ ಶಶಿಕುಮಾರ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಕೇರಳದ 25 ವರ್ಷದ ಸಲ್ಮಾನ್ ಸಲೀಂ ಎಂಬಾತನನ್ನು ಮೆಟ್ರೋಪಾಲಿಟನ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇಬ್ಬರು ಫ್ಲಾಟ್‌ ಮೇಟ್‌ಗಳು ಸೌತಾಂಪ್ಟನ್ ವೇ, ಕ್ಯಾಂಬರ್‌ವೆಲ್‌ನಲ್ಲಿರುವ ಹೌಸ್‌ ಷೇರ್‌ ನಲ್ಲಿ ವಾಸಿಸುತ್ತಿದ್ದರು.

ಶುಕ್ರವಾರ ಈ ಘಟನೆ ನಡೆದಿದ್ದು, ಕೇರಳದ ಪನಂಪಲ್ಲಿ ನಗರ ಮೂಲದ ಶಶಿಕುಮಾರ್ ಸೌತಾಂಪ್ಟನ್ ವೇನಲ್ಲಿ ವಾಸವಾಗಿದ್ದರು. ಆಗ್ನೇಯ ಲಂಡನ್‌ ನ ಪೆಕ್‌ ಹ್ಯಾಮ್‌ನಲ್ಲಿರುವ ಸೌತಾಂಪ್ಟನ್ ವೇಯಲ್ಲಿ ಇತರ ಮೂವರೊಂದಿಗೆ ಹಂಚಿಕೊಂಡ ಮನೆಯಲ್ಲಿ ನಡೆದ ಜಗಳದ ನಂತರ ಅರವಿಂದ್ ಅವರ ರೂಮ್‌ ಮೇಟ್‌ ನಿಂದ ಇರಿತಕ್ಕೆ ಒಳಗಾಗಿದ್ದಾರೆ.

ಸಲೀಂ ನನ್ನು ಶನಿವಾರ ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಮತ್ತು ಕಸ್ಟಡಿಗೆ ಕಳುಹಿಸಲಾಗಿದೆ.  ಅಪರಾಧಕ್ಕೆ ಸಾಕ್ಷಿಯಾದ ಇತರ ಇಬ್ಬರು ಮಲಯಾಳಿಗಳನ್ನು ತನಿಖೆಯ ಭಾಗವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read