alex Certify ‘ಉಮಾಂಗ್’ ಅಪ್ಲಿಕೇಶನ್ ನಲ್ಲಿ EPFO ಸೇವೆ; ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಉಮಾಂಗ್’ ಅಪ್ಲಿಕೇಶನ್ ನಲ್ಲಿ EPFO ಸೇವೆ; ಇಲ್ಲಿದೆ ಸಂಪೂರ್ಣ ವಿವರ

ಇಪಿಎಫ್‌ಓ ಸದಸ್ಯ ಪೋರ್ಟಲ್‌ನಲ್ಲಿ ನೋಂದಾಯಿತರಾದವರು ಇನ್ನು ಮುಂದೆ ಉಮಾಂಗ್ ಅಪ್ಲಿಕೇಶನ್ ಮೂಲಕ ತಂತಮ್ಮ ಭವಿಷ್ಯ ನಿಧಿಯನ್ನು ಮುಂಗಡವಾಗಿ ಹಿಂಪಡೆಯುವ, ಸಂಪೂರ್ಣವಾಗಿ ಹಿಂಪಡೆಯುವ ಅಥವಾ ಪಿಂಚಣಿ ಕ್ಲೇಂ ಮಾಡುವ ಕ್ರಿಯೆಯನ್ನು ಮಾಡಬಹುದಾಗಿದೆ.

ಇಪಿಎಫ್‌ಓ ಸೇವೆಗಳನ್ನು ಪಡೆಯಲು ಉಮಾಂಗ್ ಅಪ್ಲಿಕೇಶನ್ ‌ಅನ್ನು ಅತ್ಯಂತ ಸೂಕ್ತ ಮಾರ್ಗವೆಂದು ಭಾವಿಸಲಾಗಿದೆ.

ಉಮಾಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್‌ಓ ಸೇವೆಗಳನ್ನು ಪಡೆಯಲು ಹೀಗೆ ಮಾಡಿ:

– ಗೂಗಲ್ ಪ್ಲೇ ಸ್ಟೋರ್‌ ಅಥವಾ ಆಪಲ್ ಆಪ್ ಸ್ಟೋರ್‌ನಲ್ಲಿ ಉಮಾಂಗ್ ಅಪ್ಲಿಕೇಶನ್ ‌ಅನ್ನು ಡೌನ್ಲೋಡ್ ಮಾಡಿ.

– ಅಪ್ಲಿಕೇಶನ್ ತೆರೆದು ನಿಮ್ಮ ಆಧಾರ್‌ ಸಂಖ್ಯೆ ಹಾಗೂ ಪಾಸ್‌ವರ್ಡ್ ಮೂಲಕ ಸೈನ್‌-ಇನ್ ಆಗಿ.

– ಒಮ್ಮೆ ಲಾಗಿನ್ ಆದ ಬಳಿಕ ಸೇವೆಗಳ ಪಟ್ಟಿಯಲ್ಲಿ ’ಇಪಿಎಫ್‌ಓ’ ಆಯ್ಕೆ ಮಾಡಿ.

– ನಿಮಗೆ ಬೇಕಾದ ಇಪಿಎಫ್‌ಓ ಸೇವೆಯ ವಿಧವನ್ನು ಆಯ್ಕೆ ಮಾಡಿ. ಉದಾಹರಣೆಗೆ, ನಿಮ್ಮ ಪಿಎಫ್‌ ಬಾಕಿ ಪರಿಶೀಲಿಸಲು, ಕ್ಲೇಂ ಮಾಡಲು, ನಿಮ್ಮ ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡಲು.

– ಪರದೆ ಮೇಲೆ ಬರುವ ಸೂಚನೆಗಳನ್ನು ಪಾಲಿಸಿ ವ್ಯವಹಾರವನ್ನು ಪೂರ್ಣಗೊಳಿಸಿ.

ಉಮಾಂಗ್ ಅಪ್ಲಿಕೇಶನ್ ಮೂಲಕ ಪಿಎಫ್ ಹಿಂಪಡೆಯಲು ಹೀಗೆ ಮಾಡಿ:

– ಸೇವೆಗಳ ಪಟ್ಟಿಯಲ್ಲಿ ’ಇಪಿಎಫ್‌ಓ’ ಸೇವೆಯನ್ನು ಆಯ್ಕೆ ಮಾಡಿ. “Raise Claim” ಆಯ್ಕೆಯನ್ನು ಆರಿಸಿ.

– ನಿಮ್ಮ UAN ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಎಂಟರ್‌ ಮಾಡಿ.

– ನೀವು ಮಾಡಲಿಚ್ಛಿಸುವ ಬಗೆಯ ಹಿಂಪಡೆತವನ್ನು ಆಯ್ಕೆ ಮಾಡಿ.

– ಅಗತ್ಯ ವಿವರಗಳನ್ನು ಎಂಟರ್‌ ಮಾಡಿ ವಿನಂತಿಯನ್ನು ಸಲ್ಲಿಸಿ.

– ನಿಮ್ಮ ವಿನಂತಿಗೆ ಸ್ವೀಕೃತಿಯ ಸಂಖ್ಯೆ ಬರಲಿದೆ.

ಉಮಾಂಗ್ ಅಪ್ಲಿಕೇಶನ್‌ನ್ನು ಲಭ್ಯವಿರುವ ಇಪಿಎಫ್‌ಓ ಸೇವೆಗಳ ಪಟ್ಟಿ ಇಂತಿದೆ

– ಪಿಎಫ್‌ ಬಾಕಿ ನೋಡಲು

– ಕ್ಲೇಂ ಮಾಡಲು

– ಕೆವೈಸಿ ವಿವರಗಳನ್ನು ಸಲ್ಲಿಸಲು

– ಪಾಸ್‌ಬುಕ್ ನೋಡಲು

– ಜೀವನ್ ಪ್ರಮಾಣ್ ಪ್ರಮಾಣಪತ್ರ ಪಡೆಯಲು

– ಪಿಂಚಣಿ ಪಾವತಿ ಆರ್ಡರ್‌ (ಪಿಪಿಓ) ಡೌನ್ಲೋಡ್ ಮಾಡಲು

– ಸಮಸ್ಯೆಯನ್ನು ನೋಂದಾಯಿಸಿ, ಟ್ರ‍್ಯಾಕಿಂಗ್ ಮಾಡಲು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...