alex Certify ಗಮನಿಸಿ : ಕೃಷಿ ಚಟುವಟಿಕೆಗಳಿಗೆ ಅನಧಿಕೃತ ‘ವಿದ್ಯುತ್ ಸಂಪರ್ಕ’ ಪಡೆಯುವಂತಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಕೃಷಿ ಚಟುವಟಿಕೆಗಳಿಗೆ ಅನಧಿಕೃತ ‘ವಿದ್ಯುತ್ ಸಂಪರ್ಕ’ ಪಡೆಯುವಂತಿಲ್ಲ

ಬಳ್ಳಾರಿ : ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆ ಸಂಬಂಧಿಸಿದಂತೆ, ಗು.ವಿ.ಸ.ಕಂ.ನಿ., ದ 11 ಕೆವಿ ಮಾರ್ಗಗಳನ್ನು ಅನಧಿಕೃತವಾಗಿ 7 ತಾಸು ಮಾರ್ಗದಿಂದ ನಿರಂತರ ವಿದ್ಯುತ್ ನೀಡುವ 24 ತಾಸು ಮಾರ್ಗಗಳಗೆ ತಾವೇ ಖುದ್ದು ಸಂಪರ್ಕ ಪಡೆಯುತ್ತಿರುವುದು ಹಾಗೂ ಪಡೆಯಲು ಯತ್ನಿಸುತ್ತಿರುವುದು ಅನಧೀಕೃತವಾಗಿದೆ ಎಂದು ಬಳ್ಳಾರಿ ಗು.ವಿ.ಸ.ಕಂ.ನಿ ಕಾರ್ಯ ಮತ್ತು ಪಾಲನ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ರಂಗನಾಥಬಾಬು.ಜೆ ಅವರು ತಿಳಿಸಿದ್ದಾರೆ.

ಅನಧೀಕೃತ ಪ್ರಕ್ರಿಯೆಗಳಿಂದ ಇಲಾಖೆಯ ನೌಕರರುಗಳಗೆ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಹಿಂದುರುಗಿ ಬರುವ ವಿದ್ಯುತ್ನಿಂದಾಗಿ ಅಪಘಾತಗಳಾಗುವ ಅವಕಾಶಗಳಿದ್ದು, ಜೆಸ್ಕಾಂ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.

ಈ ತರಹದ ಪ್ರಕ್ರಿಯೆ ಮತ್ತು ಪ್ರಯತ್ನ ಮಾಡುವವರ ವಿರುದ್ಧ ಇಂಡಿಯನ್ ಎಲೆಕ್ಟ್ರಿಸಿಟಿ ಆಕ್ಟ್-2003, ಖಂಡಿಕೆ 135, 136, 137, 138, 139 ಮತ್ತು 140 ರ ಅನ್ವಯ ದೂರು ದಾಖಲಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.
ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನಧೀಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿರುವವರು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಬಳ್ಳಾರಿ ತಾಲ್ಲೂಕು-9448482161, ಕುರುಗೋಡು ತಾಲ್ಲೂಕು- 9448482161, 9449597347, 9449597353(ಎಮ್ಮಿಗನೂರು ಶಾಖೆ), ಸಂಡೂರು ತಾಲ್ಲೂಕು-9448482159, ಸಿರುಗುಪ್ಪ ತಾಲ್ಲೂಕು-9448359033, 9449597341(ತೆಕ್ಕಲಕೋಟೆ ಶಾಖೆ) ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...