ಬೆಂಗಳೂರು : ರಾಜ್ಯಕ್ಕೆ ಅಕ್ಕಿ (Rice) ನೀಡುವ ವಿಚಾರದಲ್ಲೂ ಕೇಂದ್ರ ಸರ್ಕಾರ (Central Government) ರಾಜಕೀಯ ಮಾಡುತ್ತಿದೆ ಎಂದು ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ (Minister K.H. Muniyappa) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಜೂನ್ 12 ರಂದು ರಾಜ್ಯಕ್ಕೆ ಅಕ್ಕಿ ನೀಡುವುದಾಗಿ ಎಫ್ ಸಿಐ ಹೇಳಿತ್ತು. ಆದರೆ ಜೂನ್ 13 ರಂದು ಅಕ್ಕಿ ಕೊಡುವುದಿಲ್ಲ ಎಂದು ಹೇಳಿದೆ ಎಂದರು.
ಬಡವರಿಗೆ ನೀಡುವ ಅಕ್ಕಿಯಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ತೆಲಂಗಾಣ, ಛತ್ತೀಸ್ ಗಢ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದೇವೆ. ಹೇಗಾದರೂ ಸರಿ ಅಕ್ಕಿ ಖರೀದಿಸಿ ರಾಜ್ಯದ ಜನರಿಗೆ ಪೂರೈಸುತ್ತೇವೆ. ರಾಜ್ಯದ ಜನರಿಗೆ ನೀಡಿರುವ ಅಕ್ಕಿ ಭರವಸೆಯನ್ನು ನಾವು ಈಡೇರಿಸುತ್ತೇವೆ ಎಂದರು.