alex Certify ಹಾಸಿಗೆ ಮೇಲೆ ಊಟ, ಉಪಹಾರ ಸೇವಿಸುವ ಅಭ್ಯಾಸವಿದ್ದರೆ ಬಿಟ್ಟುಬಿಡಿ, ಇಲ್ಲದಿದ್ದರೆ ಆಗಬಹುದು ಇಂಥಾ ಸಮಸ್ಯೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸಿಗೆ ಮೇಲೆ ಊಟ, ಉಪಹಾರ ಸೇವಿಸುವ ಅಭ್ಯಾಸವಿದ್ದರೆ ಬಿಟ್ಟುಬಿಡಿ, ಇಲ್ಲದಿದ್ದರೆ ಆಗಬಹುದು ಇಂಥಾ ಸಮಸ್ಯೆ!

ಎಲ್ಲಾ ಮನೆಗಳಲ್ಲೂ ಡೈನಿಂಗ್‌ ಟೇಬಲ್‌ ಇರುವುದಿಲ್ಲ. ಇದ್ದರೂ ಕೆಲವರು ಊಟ, ಉಪಹಾರವನ್ನು ಡೈನಿಂಗ್‌ ಟೇಬಲ್‌ ಮೇಲೆ ಮಾಡುವುದಿಲ್ಲ. ಬದಲಾಗಿ ಹಾಸಿಗೆಯ ಮೇಲೆ ಕುಳಿತು ತಿನ್ನುತ್ತಾರೆ. ಹಾಸಿಗೆಯ ಮೇಲೆ ಕುಳಿತು ಊಟ ಮಾಡಬಾರದು ಎಂದು ನಮ್ಮ ಹಿರಿಯರಿಂದ ಅನೇಕ ಬಾರಿ ಕೇಳಿರಬಬಹುದು. ಹಾಸಿಗೆ ಮೇಲೆ ಕುಳಿತು ತಿಂದರೆ ಅನ್ನಕ್ಕೆ ಅಪಮಾನ ಮಾಡಿದಂತೆ. ಇದರಿಂದ ನಿದ್ದೆಯಲ್ಲಿ ದುಃಸ್ವಪ್ನಗಳು ಬರುತ್ತವೆ ಎಂಬ ನಂಬಿಕೆಯೂ ಇದೆ. ಆದರೆ ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.

ಈ ಕೊಳಕು ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಿಂಗಾಪುರದಲ್ಲಿ ವಾಸಿಸುತ್ತಿರುವ ವೈದ್ಯ ಸ್ಯಾಮ್ಯುಯೆಲ್ ಟಿಕ್‌ಟಾಕ್‌ನಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.  ವ್ಯಕ್ತಿಯೊಬ್ಬರು ತೀವ್ರ ಕಿವಿ ನೋವಿನಿಂದ ಬಳಲುತ್ತಿದ್ದರಂತೆ. ವೈದ್ಯರು ಅವರ ಕಿವಿಯನ್ನು ಪರೀಕ್ಷಿಸಿದಾಗ ದಿಗ್ಭ್ರಮೆಗೊಂಡರು. ಏಕೆಂದರೆ ಜಿರಳೆ ತನ್ನ 10 ಮರಿಗಳೊಂದಿಗೆ ಕಿವಿಯಲ್ಲಿ ಬೀಡುಬಿಟ್ಟಿತ್ತು. ಈ ಎಲ್ಲಾ ಜಿರಳೆಗಳು ಮನುಷ್ಯನ ಕಿವಿಯನ್ನು ತಿನ್ನುತ್ತಿದ್ದವು. ಇದಕ್ಕೆ ಕಾರಣ ಆತನಿಗೆ ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವ ಅಭ್ಯಾಸವಿತ್ತು.

ಕೆಲವು ಆಹಾರದ ಕಣಗಳು ಹಾಸಿಗೆಯ ಮೇಲೆ, ಅಕ್ಕಪಕ್ಕದಲ್ಲಿ ಬಿದ್ದಿರುತ್ತವೆ. ಇದರಿಂದ ಅಲ್ಲಿ ಜಿರಳೆಗಳು ಉತ್ಪತ್ತಿಯಾಗಿದ್ದವು. ಆ ಜಿರಳೆಗಳು ವ್ಯಕ್ತಿಯ ಕಿವಿಯಲ್ಲಿ ಸೇರಿಕೊಂಡಿವೆ. ಇದೊಂದು ಅಪರೂಪದ ಘಟನೆ. ಆದರೆ ಈ ಸಮಸ್ಯೆ ಯಾರಿಗಾದರೂ ಯಾವಾಗ ಬೇಕಾದರೂ ಬರಬಹುದು. ಎಷ್ಟೋ ಮಂದಿ ಇದೇ ರೀತಿ ಕಿವುಡತನಕ್ಕೂ ಒಳಗಾಗಿದ್ದಾರೆ. ಜಿರಲೆಯಂತಹ ಯಾವುದೇ ಕೀಟಗಳಿಗೆ ಅತ್ಯಂತ ಸುರಕ್ಷಿತ ಸ್ಥಳ ಕಿವಿ ಎನ್ನುತ್ತಾರೆ ತಜ್ಞರು. ಹಾಗಾಗಿ ಅವು ಅವಕಾಶ ಸಿಕ್ಕರೆ ಕಿವಿಯಲ್ಲಿ ಸೇರಿಕೊಳ್ಳುತ್ತವೆ.  

ಜಿರಳೆಗಳು ಕಿವಿಯ ವಾಸನೆಯಿಂದ ಆಕರ್ಷಿತವಾಗುತ್ತವೆಯೇ?

ಅಷ್ಟೇ ಅಲ್ಲ ಕಿವಿಯಿಂದ ಬರುವ ವಾಸನೆ ಜಿರಳೆ ಸೇರಿದಂತೆ ಹಲವು ಕೀಟಗಳನ್ನು ಆಕರ್ಷಿಸುತ್ತದೆ. ಕಿವಿಯಲ್ಲಿ ಈ ರೀತಿ ಏನಾದರೂ ಸೇರಿಕೊಂಡಂತೆ ಅನಿಸಿದರೆ, ತಕ್ಷಣ ಆಲಿವ್ ಎಣ್ಣೆಯನ್ನು ಹಾಕಿ. ಇದರಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಇರುವುದರಿಂದ ಕೀಟವು ಸುಲಭವಾಗಿ ಹೊರಬರುತ್ತದೆ. ಆದರೆ ಯಾವುದೇ ಸಾಧನಗಳನ್ನು ಕಿವಿಯೊಳಗೆ ಹಾಕಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...