ಮಂಡ್ಯ : ಅಂಬರೀಷ್ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆಯ ಬೀಗರೂಟ ಇಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ನಡೆದಿದ್ದು, ಜನಸಾಗರವೇ ಹರಿದು ಬಂದಿದೆ. ಬೀಗರೂಟದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಡೂಟ ಸವಿಯಲು ಜನಸಾಗರವೇ ಹರಿದು ಬಂದಿದ್ದು, 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬೀಗರೂಟಕ್ಕೆ ಮುಗಿಬಿದ್ದಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಪೊಲೀಸರು ಲಘು ಲಾಠಿ ಬೀಸಿದ್ದಾರೆ.
ಬೀಗರೂಟದಲ್ಲಿ ಮಟನ್ ಬಿರಿಯಾನಿ, ನಾಟಿ ಕೋಳಿ, ಮೊಟ್ಟೆ, ಚಿಕನ್ ಕಬಾಬ್ ಮುದ್ದೆ, ಬೋಟಿ ಗೊಜ್ಜು ಸೇರಿದಂತೆ ಹಲವು ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. .ಅಲ್ಲದೇ ಸುಮಾರು 5000 ಮಂದಿಗೆ ಹೋಳಿಗೆಯ ವೆಜ್ ಊಟ ಹಾಕಿಸಲಾಗಿದೆ. ಇಷ್ಟೊಂದು ಜನರನ್ನು ನೋಡಿದ ಅವಿವಾ ಕೂಡ ಶಾಕ್ ಆಗಿದ್ದರು ಎಂದು ಅಭಿಷೇಕ್ ಅಂಬರೀಷ್ ಹೇಳಿದ್ದಾರೆ. ಗೆಜ್ಜಲಗೆರೆಯ 15 ಎಕರೆ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು.
TAGGED:abhi aviva marriage