ಬೆಂಗಳೂರು : ಪ್ರತಾಪ್ ಸಿಂಹ ಒಬ್ಬ ಓರ್ವ ಎಳಸು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ‘ಸಿದ್ದರಾಮಯ್ಯ ನನ್ನನ್ನು ಎಳಸು ಎಂದರು ಬೇಜಾರಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಕು ಎಂದಿದ್ದಾರೆ. ಮಾನ್ಯ ಸಿದ್ದರಾಮಯಯ್ಯನವರೇ ರಾಜ್ಯದ ಹಣಕಾಸು ಸ್ಥಿತಿ ಬಗ್ಗೆ ನಿಮಗೆ ಏನಾದರೂ ಅರಿವು ಉಂಟಾ..? ಅಧಿಕಾರಕ್ಕೆ ಬರುವ ತವಕದಲ್ಲಿ ಗ್ಯಾರಂಟಿ ಘೋಷಣೆ ಮಾಡಿ ಈಗ ವಿಲ ವಿಲ ಒದ್ದಾಡುತ್ತೀದ್ದೀರಿ ಎಂದು ವಾಗ್ಧಾಳಿ ನಡೆಸಿದ್ದಾರೆ.
ನನ್ನನ್ನ ಚೈಲ್ಡ್ ಎಂದು ಕರೆಯಿರಿ ಬೇಜಾರು ಇಲ್ಲ. ಆದರೆ, ರಾಜ್ಯದಲ್ಲಿ ಸಂಪನ್ಮೂಲ ಕ್ರೋಢಿಕರಣ ಮಾಡುವುದು ಹೇಗೆ ತಿಳಿಸಿ.? ಎಂದು ಪ್ರತಾಪ್ ಸಿಂಹ ಸವಾಲ್ ಹಾಕಿದ್ದಾರೆ.