ಬೆಂಗಳೂರು: ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಫೋನ್ ನಂಬರ್ ಫಲಕ ಅಳವಡಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಪ್ರತಿ ಪೊಲೀಸ್ ಠಾಣೆಯಲ್ಲಿ ಎಸ್.ಪಿ., ಎ.ಎಸ್.ಪಿ., ಡಿ.ವೈ.ಎಸ್.ಪಿ., ಕಮಿಷನರೇಟ್ ವ್ಯಾಪ್ತಿಯಲ್ಲಿ ಕಮಿಷನರ್, ಡಿಸಿಪಿ, ಎಸಿಪಿಗಳ ನಂಬರ್ ಫಲಕ ಅಳವಡಿಸಬೇಕು. ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಫಲಕ ಹಾಕಲು ಆದೇಶ ನೀಡಲಾಗಿದೆ.
ಠಾಣೆಯ ಆಯ್ದ ಸ್ಥಳಗಳಲ್ಲಿಯೂ ಫೋನ್ ನಂಬರ್ ಗಳು ಇರುವ ಫಲಕ ಅಳವಡಿಸಬೇಕು. ಎರಡು ದಿನದಲ್ಲಿ ಫಲಕ ಹಾಕಿ ವರದಿಯನ್ನು ಡಿಜಿ ಕಚೇರಿಗೆ ಕಳಿಸಲು ಸೂಚನೆ ನೀಡಲಾಗಿದೆ. ಠಾಣೆಯಲ್ಲಿ ಯಾವುದೇ ದೂರು ಸ್ವೀಕರಿಸದಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಫಲಕ ಹಾಕಬೇಕು. ಫಲಕದಲ್ಲಿ ಅಧಿಕಾರಿಗಳ ಫೋನ್ ನಂಬರ್ ಕಡ್ಡಾಯವಾಗಿ ಹಾಕಲು ಸೂಚನೆ ನೀಡಲಾಗಿದೆ.