ನವದೆಹಲಿ: ಆಧಾರ್ ಅಪ್ಡೇಟ್ ಗೆ ಮೂರು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವತಿಯಿಂದ ಉಚಿತವಾಗಿ ದಾಖಲೆ ಸಹಿತ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವ ಅವಕಾಶದ ಅವಧಿಯನ್ನು ಸೆಪ್ಟೆಂಬರ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಮೊದಲು ಉಚಿತವಾಗಿ ಆಧಾರ್ ಅಪ್ ಡೇಟ್ ಗೆ ಜೂನ್ 14 ಕೊನೆಯ ದಿನವಾಗಿತ್ತು. ನಾಗರೀಕರು ಗುರುತಿನ ದಾಖಲೆಗಳು ಹಾಗೂ ವಿಳಾಸ ದಾಖಲೆಗಳನ್ನು ಆನ್ಲೈನ್ ಮೂಲಕ ಉಚಿತವಾಗಿ ಅಪ್ಲೋಡ್ ಮಾಡಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಸೆಪ್ಟೆಂಬರ್ 14ರ ವರೆಗೆ ಅವಕಾಶ ಕಲ್ಪಿಸಲಾಗಿದೆ.