‘ಸುಳ್ಳುಗಳ ಮೂಲಕ ಸರ್ಕಾರ ರಾಜ್ಯದ ಜನರ ಆಶಯಗಳನ್ನು ಹುಸಿಗೊಳಿಸುತ್ತಿದೆ’ : ಬಿಜೆಪಿ ಟೀಕೆ

ಬೆಂಗಳೂರು : ಸುಳ್ಳುಗಳ ಮೂಲಕ ರಾಜ್ಯ ಸರ್ಕಾರ ರಾಜ್ಯದ ಜನರ ಆಶಯಗಳನ್ನು ಹುಸಿಗೊಳಿಸುತ್ತಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

ವಿದ್ಯುತ್ ದರ ಏರಿಕೆಯನ್ನು ಹಿಂದಿನ ಸರ್ಕಾರ ಮಾಡಿದ್ದು ಎಂದು ಆಪಾದನೆ ಮಾಡುತ್ತಿರುವ ಕಾಂಗ್ರೆಸ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ನಮ್ಮ ಸರ್ಕಾರ ಒಪ್ಪಿರಲಿಲ್ಲ. ಜೂನ್ 2 ರಂದು ಆದೇಶ ಬಂದಾಗ ರಾಜ್ಯದಲ್ಲಿದ್ದಿದ್ದು ಕಾಂಗ್ರೆಸ್ ಸರ್ಕಾರ. ತಮ್ಮ ಸುಳ್ಳುಗಳ ಮೂಲಕ ರಾಜ್ಯದ ಜನತೆಯ ಆಶಯಗಳನ್ನು ಹುಸಿಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸುತ್ತೇನೆ.

ಕರ್ನಾಟಕದ ಹೆಮ್ಮೆಯ ನಂದಿನಿಯನ್ನು ತನ್ನ ಚುನಾವಣಾ ಲಾಭಕ್ಕಾಗಿ ಅನಗತ್ಯ ಅಪಪ್ರಚಾರಗಳ ಕೂಪಕ್ಕೆ ತಳ್ಳಿತ್ತು. ತನ್ನ ಚುನಾವಣಾ ಸ್ವಾರ್ಥಕ್ಕಾಗಿ ರಾಜ್ಯ-ರಾಜ್ಯಗಳ ನಡುವೆ ಕಿಡಿ ಹೊತ್ತಿಸಲು ಕಾಂಗ್ರೆಸ್ ಪರಿಚಯಿಸಿದ ಒಡಕು ನೀತಿಗೆ ಇಂದು ನಂದಿನಿಯೇ ಬಲಿಯಾಗಬೇಕಾಗಿದೆ. ಸಿದ್ದರಾಮಯ್ಯರು ಮತ್ತು ಅವರ ಎಟಿಎಂ ಸರ್ಕಾರ ಇದನ್ನು ವಿರೋಧಿಸುವ ಎದೆಗಾರಿಕೆ ತೋರುವರೇ ಅಥವಾ ಹೈ ಕಮಾಂಡ್ ಹಾಗೂ ರಣದೀಪ್ ಸುರ್ಜೇವಾಲಾರಂಥ ಕಲೆಕ್ಷನ್ ಏಜೆಂಟರ ಸಂತೃಪ್ತಿಗಾಗಿ ದಿವ್ಯ ಮೌನ ವಹಿಸುವರೇ? ಎಂದು ಬಿಜೆಪಿ ಟ್ವೀಟ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

https://twitter.com/BJP4Karnataka/status/1669262855000977408?ref_src=twsrc%5Egoogle%7Ctwcamp%5Eserp%7Ctwgr%5Etweet

https://twitter.com/BJP4Karnataka/status/1669257540251824128

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read