ಕಾಶಿಯಾತ್ರೆಗೆ ಹೋಗಿದ್ದ ಕನ್ನಡಿಗರ ಮೇಲೆ ಸ್ಥಳೀಯರು ಗೂಂಡಾಗಿರಿ ನಡೆಸಿ ಮಹಿಳಾ ಪ್ರಯಾಣಿಕರ ಮೇಲೆ ದರ್ಪ ತೋರಿಸಿದ ಘಟನೆ ವಾರಣಾಸಿಯ ದೀನ್ ದಯಾಳ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಸೀಟ್ ರಿಸರ್ವೇಷನ್ ಮಾಡಿದ್ರೂ ಕೂಡ ಸ್ಥಳೀಯರು ಮಹಿಳೆಯರನ್ನು ರೈಲಿನಿಂದ ಹೊರ ದಬ್ಬಿ ಮಹಿಳೆಯರ ಮೇಲೆ ದರ್ಪ ಎಸಗಿದ್ದಾರೆ. ಬೆಂಗಳೂರಿನಿಂದ ಹೊರಟಂತಹ 40-45 ಮಂದಿ ಕನ್ನಡಿಗರನ್ನು ರೈಲಿನಿಂದ ಹೊರದಬ್ಬಿದ್ದಾರೆ ಎನ್ನಲಾಗಿದೆ.
ಸೀಟ್ ರಿಸರ್ವೇಷನ್ ಮಾಡಿದ್ರೂ ಕೂಡ ಸೀಟು ಬಿಡದೇ ಸ್ಥಳೀಯರು ದರ್ಪ ತೋರಿದ್ದಾರೆ. ಈ ಸಂಬಂಧ
ರೈಲ್ವೇ ಅಧಿಕಾರಿಗಳಿಗೆ ದೂರು ಕೊಟ್ಟರೂ ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಹಾಯಕ್ಕಾಗಿ ಬೇಡಿಕೊಂಡರೂ ಯಾವ ಅಧಿಕಾರಿ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಾರಣಾಸಿಯಿಂದ 120 ಕಿಮೀ ದೂರ ಇರುವ ದೀನ್ ದಯಾಳ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕನ್ನಡಿಗರ ಮೇಲಿನ ದರ್ಪಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.