ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿಯ ಬೆಲೆ ಈಗಾಗ್ಲೇ ರಿವೀಲ್ ಆಗಿದೆ. ಬೆಲೆಯನ್ನು ಕಂಪನಿ ಬಹಿರಂಗಪಡಿಸಿದ ಬೆನ್ನಲ್ಲೇ ಜನರು ಜಿಮ್ನಿಗಾಗಿ ಬುಕ್ಕಿಂಗ್ ಮಾಡಲಾರಂಭಿಸಿದ್ದಾರೆ. ಬೆಲೆ ಬಹಿರಂಗಗೊಂಡ ತಕ್ಷಣ ಜಿಮ್ನಿಯ ಬುಕಿಂಗ್ ಹೆಚ್ಚಾಗುತ್ತಿದೆ ಅಂತಾ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಜಿಮ್ನಿ ಮಾರುತಿಯ ಆಫ್ ರೋಡ್ ಕಾರು. 5-ಬಾಗಿಲುಗಳನ್ನು ಇದು ಹೊಂದಿದೆ. 4X4 ಪ್ರಮಾಣಿತ ವೈಶಿಷ್ಟ್ಯದಲ್ಲೂ ಇದು ಬರಲಿದೆ.
ಅದರ 4X2 ರೂಪಾಂತರಕ್ಕೆ ಸಾಕಷ್ಟು ಬೇಡಿಕೆಯಿದೆ. ಆದರೆ ಸದ್ಯಕ್ಕೆ ಈ ಮಾದರಿ ಬಿಡುಗಡೆಯಾಗುತ್ತಿಲ್ಲ. ಮಾರುತಿ ಜಿಮ್ನಿಯ ಬೆಲೆ ಬಹಿರಂಗಗೊಂಡ ನಂತರ ಬುಕ್ಕಿಂಗ್ ದಿನಕ್ಕೆ 90 ರಿಂದ 150 ಕ್ಕೆ ಏರಿದೆ. ಕಂಪನಿಯು ಈ ಬೇಡಿಕೆಯನ್ನು ಪೂರೈಸಲು ಕೆಲವು ತಿಂಗಳುಗಳ ಮಾರಾಟವನ್ನು ಮೊದಲು ನಿರ್ಣಯಿಸುತ್ತದೆ. ಮಾರುತಿ ಸುಜುಕಿ ಜಿಮ್ನಿಯ ಆರಂಭಿಕ ಬೆಲೆ 12.7 ಲಕ್ಷ ರೂಪಾಯಿ. ಕಾರನ್ನು ಸ್ಟ್ಯಾಂಡರ್ಡ್ 4X4 ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಸಿದ್ಧಪಡಿಸಲಾಗಿದೆ.
ಆಫ್-ರೋಡರ್ ಜಿಪ್ಸಿಯಂತೆ ಜಿಮ್ನಿಯನ್ನು ಸಹ ವಿನ್ಯಾಸಗೊಳಿಸಲಾಗಿದೆ. ಭಾರತದ ರಸ್ತೆಗಳಿಗೆ ಸೂಕ್ತವಾಗಿರಲಿ ಅನ್ನೋ ಕಾರಣಕ್ಕೆ 5 ಬಾಗಿಲುಗಳನ್ನು ಅಳವಡಿಸಲಾಗಿದೆ. ಜಿಮ್ನಿ 5-ಸ್ಪೀಡ್ ಸ್ಟ್ಯಾಂಡರ್ಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ಸ್ಪೀಡ್ ಸ್ವಯಂಚಾಲಿತ ಟಾರ್ಕ್ ಪರಿವರ್ತಕ 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಜಿಮ್ನಿಯನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುವುದು. ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಎಸ್‌ಯುವಿ ವಿಭಾಗಕ್ಕೆ ಸೇರಿಸಲಾಗಿದೆ.