ಪರ ಪುರುಷನೊಂದಿಗೆ ಮಾತನಾಡಿದ್ದಕ್ಕೆ ಪ್ರಿಯಕರನಿಂದಲೇ ಯುವತಿ ಹತ್ಯೆ

ದೆಹಲಿ ನೆರೆಯ ಫರಿದಾಬಾದ್‌ನ ಓಯೋ ಹೋಟೆಲ್‌ನಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆಂಬ ಶಂಕೆಯಿಂದ ಯುವತಿಯನ್ನು ವ್ಯಕ್ತಿಯೊಬ್ಬ ಕತ್ತು ಹಿಸುಕಿ ಕೊಂದಿದ್ದಾನೆ.

ದೆಹಲಿ ಮೂಲದ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ 24 ವರ್ಷದ ಆಕಾಶ್ ಎಂಬಾತ ಯುವತಿಗೆ ಸುಮಾರು ಎಂಟು ವರ್ಷಗಳಿಂದ ಪರಿಚಿತನಾಗಿದ್ದ. ಆಕೆ ಬೇರೆ ಪುರುಷನೊಂದಿಗೆ ಮಾತನಾಡುತ್ತಿದ್ದಳು ಎಂದು ಆರೋಪಿ ಶಂಕಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ ಫರಿದಾಬಾದ್‌ನ ಎನ್‌ಎಚ್‌ಪಿಸಿ ಚೌಕ್ ಬಳಿಯ ಓಯೋ ಹೋಟೆಲ್‌ಗೆ ಯುವತಿಯನ್ನು ಆಕಾಶ್ ಕರೆದಿದ್ದ. ಅಲ್ಲಿ ಅವರಿಬ್ಬರೂ ಜಗಳವಾಡಿದ್ದಾರೆ. ನಂತರ ವ್ಯಕ್ತಿ ಆಕೆಯನ್ನು ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ವ್ಯಕ್ತಿಯನ್ನು ಹೋಟೆಲ್‌ನಿಂದ ಬಂಧಿಸಿದ್ದು, ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಸ್ಥಳೀಯ ನ್ಯಾಯಾಲಯವು ಒಂದು ದಿನದ ಪೊಲೀಸ್ ಕಸ್ಟಡಿಯನ್ನು ನೀಡಿದೆ.

Man Strangles Woman To Death With Rope In OYO Hotel Near Delhi's Faridabad

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read