ಕೋಲಾರ: ಕ್ಷುಲ್ಕಕ ಕಾರಣಕ್ಕೆ ದಂಪತಿ ನಡುವೆ ಗಲಾಟೆ ನಡೆದು ಪಾಪಿ ಪತಿ ಮಗುವನ್ನು ಕೊಂದು ಹಾಕಿದ್ದಾನೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ. ಕೊತ್ತೂರು ಗ್ರಾಮದಲ್ಲಿ ಘಟನೆ ನಡೆದಿದೆ.
ದಂಪತಿಯ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಗಲಾಟೆ ವೇಳೆ ಕತ್ತು ಹಿಸುಕಿ ಎರಡು ವರ್ಷದ ರಮ್ಯಾಳನ್ನು 32 ವರ್ಷದ ಗಂಗಾಧರ್ ಎಂಬಾತ ಕೊಲೆ ಮಾಡಿದ್ದಾನೆ. ಕೃತ್ಯವೆಸಗಿ ಆರೋಪಿ ಪರಾರಿಯಾಗಿದ್ದಾನೆ. ನಂಗಲಿ ಪೊಲೀಸ್ ಠಾಣೆಗೆ ಪತ್ನಿ ರೇಣುಕಾ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.