![](https://kannadadunia.com/wp-content/uploads/2023/06/cyclone-1-400x238.jpg)
ಬಿಪರ್ ಜಾಯ್ ಅಬ್ಬರ ಜೋರಾಗಿದ್ದು, ಮುಂಬೈ ನ ಜುಹು ಬೀಚ್ ನಲ್ಲಿ ಇಳಿದ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇಬ್ಬರು ನಾಪತ್ತೆಯಾಗಿದ್ದಾರೆ.
ಎಚ್ಚರಿಕೆ ನಡುವೆಯೂ ಜುಹು ಬೀಚ್ ಗೆ ಇಳಿದ ಐವರ ಪೈಕಿ ಓರ್ವ ಬಾಲಕ ಮೃತಪಟ್ಟಿದ್ದು, ಆತನ ಶವ ಪತ್ತೆಯಾಗಿದೆ. ಇಬ್ಬರು ಬಾಲಕರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದ ಇಬ್ಬರಿಗಾಗಿ ಸೇನಾಪಡೆ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಬಿಪರ್ ಜಾಯ್ ಅಬ್ಬರದ ಹಿನ್ನೆಲೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಕೂಡ ಐವರು ಸಮುದ್ರಕ್ಕೆ ಇಳಿದಿದ್ದರು.