ನವದೆಹಲಿ: ಎಂ.ಬಿ.ಬಿ.ಎಸ್. ಪದವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊಸ ನಿಯಮ ಜಾರಿಗೆ ತಂದಿದೆ.
ವಿದ್ಯಾರ್ಥಿಗಳು ತಾವು ಕೋರ್ಸ್ ಗೆ ಪ್ರವೇಶ ಪಡೆದ ದಿನದಿಂದ 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. ಮೊದಲ ವರ್ಷದ ಫೈನಲ್ ಪರೀಕ್ಷೆ ಉತ್ತೀರ್ಣವಾಗಲು ಗರಿಷ್ಠ ನಾಲ್ಕು ಅವಕಾಶ ನೀಡಲಾಗುತ್ತದೆ. ನೀಟ್ –ಯುಜಿ ಅರ್ಹತೆ ಆಧಾರದ ಮೇಲೆ ದೇಶದ ಎಲ್ಲಾ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಕೌನ್ಸೆಲಿಂಗ್ ಇರುತ್ತದೆ.
ಇಂಟರ್ನ್ ಶಿಪ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿ ಪದವಿ ಪಡೆದಿದ್ದಾರೆ ಎಂದು ಪರಿಗಣಿಸಲಾಗುವುದಿಲ್ಲ. ಎಂಬಿಬಿಎಸ್ ಪರೀಕ್ಷೆ ಉತ್ತೀರ್ಣಕ್ಕೆ ಗರಿಷ್ಠ 9 ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ. ಪದವಿ ಹಂತ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದವರು 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. ಮೊದಲ ವರ್ಷದ ಎಂಬಿಬಿಎಸ್ ಪರೀಕ್ಷೆ ಅನುತ್ತೀರ್ಣರಾದವರೆಗೆ ನಾಲ್ಕು ಹೆಚ್ಚುವರಿ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.