ರಾಜ್ಯದಲ್ಲಿ ಹಿಟ್ಲರ್ ಸರ್ಕಾರದಿಂದ ತಾಲಿಬಾನ್ ಅಡಳಿತಕ್ಕೆ ಒತ್ತು : ಬಿಜೆಪಿ ವಾಗ್ಧಾಳಿ

ಬೆಂಗಳೂರು : ರಾಜ್ಯದಲ್ಲಿ ಹಿಟ್ಲರ್ ಸರ್ಕಾರದಿಂದ ತಾಲಿಬಾನ್ ಅಡಳಿತಕ್ಕೆ ಒತ್ತು ನೀಡುತ್ತಿದೆ ಎಂದು ಬಿಜೆಪಿ (BJP) ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ( Sate Government) ವಿರುದ್ಧ ವಾಗ್ಧಾಳಿ ನಡೆಸಿದ ಬಿಜೆಪಿ ಹಲವು ವಿಚಾರಗಳನ್ನಿಟ್ಟುಕೊಂಡು ಟೀಕಾ ಪ್ರಹಾರ ನಡೆಸಿದೆ.

ಸಾಮಾಜಿಕ ಜಾಲತಾಣದ ಮೇಲೆ ನಿರ್ಬಂಧ. ರಾಜಕೀಯ ವಿರೋಧಿಗಳ ಮೇಲೆ ನಕಲಿ ಕೇಸ್. ಸರ್ಕಾರವನ್ನು ಪ್ರಶ್ನಿಸುವ ಸರ್ಕಾರಿ ನೌಕರರ ಅಮಾನತು. ಕ್ರಾಂತಿಕಾರಿಗಳ ಬಗೆಗಿನ ಪಾಠಕ್ಕೆ ಕೂಕ್. ತುಷ್ಟೀಕರಣದ ಪರಿಣಾಮ ಹದಗೆಟ್ಟ ಕಾನೂನು ಸುವ್ಯವಸ್ಥೆ. ಮೈಮರೆತ ಸಿದ್ದರಾಮಯ್ಯರವರ ಎಟಿಎಂ ಸರ್ಕಾರದಿಂದ ಎದುರಾದ ಸಂಕಷ್ಟಕ್ಕಿಲ್ಲ ಪರಿಹಾರ. ಚಂಡಮಾರುತದ ಅಬ್ಬರಕ್ಕೆ ಕಂಗಾಲಾದ ಮೀನುಗಾರರನ್ನು ಕೇಳುವರರಿಲ್ಲ. ಜಲಾಶಯ ಬರಿದಾಗಿ ಬಿತ್ತನೆ ಮಾಡಲಾಗದೆ ಕೈಕಟ್ಟಿ ಕೂತ ಅನ್ನದಾತನ ಕಣ್ಣೀರು ಒರೆಸುವವರಿಲ್ಲ. ಜನಸಾಮಾನ್ಯನ ಮೇಲೆ ಬೆಲೆ ಏರಿಕೆಯ ಬರೆ. ಕೈಗಾರಿಕೆಗಳು ಮುಚ್ಚುವ ಭೀತಿ, ಉದ್ಯೋಗ ನಷ್ಟಕ್ಕೆ ಕ್ಯಾರೇಯಿಲ್ಲ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

ಯಾವುದು ಆಕ್ಷೇಪಾರ್ಹ, ಯಾವುದು ಅವಹೇಳನಕಾರಿ ಎಂದು ಸರ್ಟಿಫಿಕೇಟ್ ಕೊಡುವುದು ಕಾಂಗ್ರೆಸ್
ಸರ್ಕಾರದ ಕೆಲಸವಲ್ಲ… ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಇದರಲ್ಲಿ ಮೂಗು ತೂರಿಸುತ್ತಿರುವ ಸಿದ್ದರಾಮಯ್ಯರವರ ಸರ್ಕಾರ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1668177278734569473

https://twitter.com/BJP4Karnataka/status/1668152134699978752?ref_src=twsrc%5Egoogle%7Ctwcamp%5Eserp%7Ctwgr%5Etweet

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read