Breaking News : ಕಲಬುರಗಿಯಲ್ಲಿ ರೈಲು ಹಳಿ ಮೇಲೆ ಬಿದ್ದ ಬಂಡೆ : ತಪ್ಪಿದ ಭಾರಿ ದುರಂತ

ಕಲಬುರಗಿ : ಕಲಬುರಗಿಯಲ್ಲಿ ರೈಲು ( Train) ಹಳಿ ಮೇಲೆ ಬಂಡೆಯೊಂದು ಉರುಳಿ ಬಿದ್ದಿದ್ದು, ಭಾರಿ ಅನಾಹುತವೊಂದು ತಪ್ಪಿದೆ.

ಸುರಂಗ ಮಾರ್ಗದ ಒಳಗಿನ ರೈಲು ಹಳಿಗಳ ಮೇಲೆ ಬಂಡೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಹಿನ್ನೆಲೆ ಬೀದರ್-ಕಲಬುರಗಿ ಪ್ಯಾಸೆಂಜರ್ ರೈಲು 2 ಗಂಟೆ ನಿಂತಲ್ಲೇ ನಿಂತಿದೆ. ನಂತರ ರೈಲ್ವೆ ಸಿಬ್ಬಂದಿಗಳು ಬಂಡೆಗಳನ್ನು ತೆರವುಗೊಳಿಸಿ ರೈಲು ಸಂಚರಿಸಲು ಅನುವು ಮಾಡಿಕೊಟ್ಟರು.

ಕಳೆದ ವಾರ ಒಡಿಶಾದಲ್ಲಿ ಭೀಕರ ರೈಲು ದುರಂತ ಸಂಭವಿಸಿ 280 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಮಾಸುವ ಮುನ್ನವೇ ಹಲವು ಕಡೆ ಇಂತಹ ಘಟನೆಗಳು ಮತ್ತೆ ನಡೆಯುತ್ತಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read