alex Certify ಒಡಿಶಾ ರೈಲು ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ; ಸಾಮೂಹಿಕ ಕೇಶಮುಂಡನ ಮಾಡಿಸಿಕೊಂಡ ಸ್ಥಳೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ರೈಲು ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ; ಸಾಮೂಹಿಕ ಕೇಶಮುಂಡನ ಮಾಡಿಸಿಕೊಂಡ ಸ್ಥಳೀಯರು

ಒಡಿಶಾದ ಬಾಲಸೋರ್ ರೈಲು ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಹನಾಗಾದ ಸ್ಥಳೀಯರು ಸಾಮೂಹಿಕ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ. ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯರು 10 ನೇ ದಿನದ ಆಚರಣೆಗಳನ್ನು ಸಹ ಮಾಡಿದರು.

ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹನಾಗಾದ ಸ್ಥಳೀಯರು ಸಾಮೂಹಿಕ ಕೇಶಮುಂಡನ ಮಾಡಿಸಿಕೊಂಡು 10ನೇ ದಿನದ ಕಾರ್ಯ ಮಾಡಿದ್ದಾರೆ.

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಎರಡು ಎಕ್ಸ್ ಪ್ರೆಸ್ ರೈಲುಗಳು ಮತ್ತು ಒಂದು ಗೂಡ್ಸ್ ರೈಲನ್ನು ಒಳಗೊಂಡ ತ್ರಿವಳಿ ರೈಲು ಅಪಘಾತದಲ್ಲಿ ಒಟ್ಟು 275 ಮಂದಿ ಸಾವನ್ನಪ್ಪಿದ್ದು 1100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

— Press Trust of India (@PTI_News) June 11, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...