ತುಮಕೂರು: ಮೇಕೆಗೆ ಸೊಪ್ಪು ತರಲು ಹೋಗಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿರುವ ಘೋರ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರನಕುಂಟೆಯಲ್ಲಿ ನಡೆದಿದೆ.
ದ್ವಾರನಕುಂಟೆ ಗ್ರಾಮದ ಸತೀಶ್ (25) ಹಾಗೂ ಪ್ರಸನ್ನ ಮೃತ ಸಹೋದರರು. ಬಾವಿ ದಡದಲ್ಲಿ ಸೊಪ್ಪು ಕೊಯ್ಯುತ್ತಿದ್ದಾಗ ಪ್ರಸನ್ನ ಎಂಬುವವರು ಬಾವಿಗೆ ಜಾರಿ ಬಿದ್ದಿದ್ದಾರೆ. ಪ್ರಸನ್ನನನ್ನು ರಕ್ಷಿಸಲು ಬಾವಿಗೆ ಇಳಿದ ತಮ್ಮ ಸತೀಶ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸಹೋದರರಿಬ್ಬರೂ ಬಾವಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಪುಟ್ಟನಾಯಕನಹಳ್ಳಿ ಪೊಲಿಸರು ಭೇಟಿ ನೀಡಿದ್ದಾರೆ.