HomeKarnatakaBIG NEWS: ಗ್ಯಾರಂಟಿ ನೂರಕ್ಕೆ ನೂರರಷ್ಟು ಸುಳ್ಳಿನ ಸರಮಾಲೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

BIG NEWS: ಗ್ಯಾರಂಟಿ ನೂರಕ್ಕೆ ನೂರರಷ್ಟು ಸುಳ್ಳಿನ ಸರಮಾಲೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹುಬ್ಬಳ್ಳಿ: ಕಾಂಗ್ರೆಸ್ ನ ಗ್ಯಾರಂಟಿಗಳು ನೂರಕ್ಕೆ ನೂರರಷ್ಟು ಸುಳ್ಳಿನ ಸರಮಾಲೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಚುನಾವಣೆಗೂ ಮುನ್ನ ಎಲ್ಲರಿಗೂ ಉಚಿತ ಎಂದು ಗ್ಯಾರಂಟಿ ಘೋಷಿಸಿ ಈಗ ಷರತ್ತುಗಳನ್ನು ಹಾಕುತ್ತಿದೆ. ಈ ಗ್ಯಾರಂಟಿಗಳು ನೂರಕ್ಕೆ ನೂರರಷ್ಟು ಸುಳ್ಳಿನ ಸರಮಾಲೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹಲಕ್ಷ್ಮಿ ಎಲ್ಲಾ ಮಹಿಳೆಯರಿಗೆ ಅನ್ವಯ ಎಂದರು. ಈಗ ಪತಿ ತೆರಿಗೆ ಪಾವತಿಸಿದರೆ ಅನ್ವಯವಾಗಲ್ಲ, ಮಗ ತೆರಿಗೆ ಪಾವತಿಸಿದರೂ ಅನ್ವಯ ಇಲ್ಲ ಎಂದು ಹೇಳುತಿದ್ದಾರೆ. ಉಚಿತ ವಿದ್ಯುತ್ ಎಂದು ಘೋಷಣೆ ಮಾಡಿ ಈಗ ಕಂಡಿಷನ್ ಹಾಕುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಹೇಳುವುದರಲ್ಲೇ ಖ್ಯಾತಿ ಪಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ಸುಳ್ಳಿನ ಭರವಸೆ ಹೆಚ್ಚು ದಿನ ನಡೆಯುವುದಿಲ್ಲ. ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.

For Latest News Updates, Join Our Whatsapp Community🚩
RELATED ARTICLES

Most Popular