ಆತ ಕಳ್ಳತನ ಮಾಡಲೆಂದೇ ಅಂಗಡಿಗೆ ನುಗ್ಗಿದ್ದ. ತನ್ನ ಗುರುತು ಸಿಗಬಾರದೆಂದು ಮುಖಕ್ಕೆ ಪೆಟ್ಟಿಗೆಯಿಂದ ಮುಚ್ಚಿಕೊಂಡಿದ್ದ. ಆದರೆ ಕಳ್ಳತನದ ವೇಳೆ ಅದೊಂದು ತಪ್ಪಿನಿಂದ ಆತ ಸಿಕ್ಕಿಹಾಕಿಕೊಂಡಿದ್ದಾನೆ.
ಅಮೆರಿಕದ ಫ್ಲೋರಿಡಾದ ಅಂಗಡಿಯೊಂದರಲ್ಲಿ ಸೆರೆಹಿಡಿಯಲಾದ ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ ಕಳ್ಳನ ಕೃತ್ಯ ಸೆರೆಯಾಗಿದೆ.
ಕಳ್ಳ ತನ್ನ ಮುಖವನ್ನು ಮರೆಮಾಡಲು ತಾತ್ಕಾಲಿಕ ಮುಖವಾಡವಾಗಿ ರಟ್ಟಿನ ಪೆಟ್ಟಿಗೆಯನ್ನು ಧರಿಸಿ ಅಂಗಡಿಯೊಳಕ್ಕೆ ನುಗ್ಗಿದ. ಈ ಘಟನೆಯು ಮಿಯಾಮಿ ಗಾರ್ಡನ್ಸ್ ನಲ್ಲಿರುವ ಫೋನ್ ರಿಪೇರಿ ಅಂಗಡಿಯಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿ ಗಾಜಿನ ಡಿಸ್ಪ್ಲೇಗಳನ್ನು ಒಡೆದು ಹಾಕಿ ತ್ವರಿತವಾಗಿ ಐಫೋನ್ ಗಳನ್ನು ಬಾಚಿಕೊಳ್ಳುತ್ತಾನೆ. ರಟ್ಟಿನ ಬಾಕ್ಸ್ ನಿಂದ ತನ್ನ ಮುಖ ಮರೆಮಾಡಿ ಈ ಕೃತ್ಯವೆಸಗುತ್ತಾನೆ. ಆದರೆ ಒಂದು ಹಂತದಲ್ಲಿ ಆತ ಮುಖದ ಮೇಲಿದ್ದ ರಟ್ಟಿನ ಬಾಕ್ಸನ್ನು ಸ್ವಲ್ಪ ಹಿಂದೆ ಸರಿಸಿದಾಗ ಕ್ಯಾಮೆರಾದಲ್ಲಿ ಆತನ ಮುಖ ಚಹರೆ ಸೆರೆಸಿಕ್ಕಿದೆ.
ಈ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಅಂಗಡಿ ಮಾಲೀಕ ಹಂಚಿಕೊಂಡು ಕಳ್ಳನ ಪತ್ತೆಗೆ ಮನವಿ ಮಾಡಿದ್ರು. ಕೊನೆಗೆ
ಕಳ್ಳನು ತನ್ನ ಸ್ನೇಹಿತರೊಂದಿಗೆ ಹತ್ತಿರದ ಮದ್ಯದಂಗಡಿಯಲ್ಲಿದ್ದಾಗ ಮಿಯಾಮಿ ಗಾರ್ಡನ್ಸ್ ಪೊಲೀಸರು ಆತನನ್ನು ಬಂಧಿಸಿದರು.