ಬಳ್ಳಾರಿ : ನಗರದ ಪ್ರಮುಖ ರಸ್ತೆಯಾದ ಎಸ್ಎನ್ ಪೇಟೆ ರೈಲ್ವೇ ಅಂಡರ್ಪಾಸ್ ನ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಜೂ. 12 ರಿಂದ ಕಾಮಗಾರಿ ಮುಕ್ತಾಯವಾಗುವವರೆಗೂ ಅಂಡರ್ಪಾಸ್ (underpass)
ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿ ವಾಹನ ಸಂಚಾರ (Vehicular traffic) ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಎಸ್ಎನ್ ಪೇಟೆಯ ರೈಲ್ವೇ ಅಂಡರ್ಪಾಸ್ ರಸ್ತೆಯು ಎರಡು ಬದಿಯ ಗೈಡ್ ವಾಲ್ ಗಳಿಂದ ಹಾಗೂ ರಸ್ತೆಯ ಕೆಳಭಾಗದ ಜಾಯಿಂಟ್ ಗಳಿಂದ ಸಿಪೇಜ್ ವಾಟರ್ ಬರುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.
ಎಂ.ಜಿ.ಎನ್.ವಿ.ವೈ ಯೋಜನೆ ಅಡಿಯಲ್ಲಿ ರಸ್ತೆಯ ದುರಸ್ತಿಗಾಗಿ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರಿಗೆ ನೀಡಲಾಗಿರುತ್ತದೆ. ಗುತ್ತಿಗೆದಾರರು ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಿದ್ದು, ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳಿಂದ ಕಾಮಗಾರಿಗೆ ಮತ್ತು ವಾಹನ ಸವಾರರಿಗೂ ಆಡಚಣೆ ಉಂಟಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವುದು ಅವಶ್ಯಕವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.