ವೈರಲ್ ಆದ ಡಾನ್ಸಿಂಗ್ ಭೇಲ್ ಪುರಿ ಮ್ಯಾನ್‌ ವಿಡಿಯೋ; ಅಯ್ಯಯ್ಯೋ ಇವನೇನ್ ಹೀಗ್ ಮಾಡ್ತಿದ್ದಾನೆ ಎಂದ ನೆಟ್ಟಿಗರು

ಭೇಲ್ ಪುರಿ ಭಾರತದ ಅಚ್ಚುಮೆಚ್ಚಿನ ಬೀದಿ ಆಹಾರ ತಿಂಡಿಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ. ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಇದನ್ನು ಆನಂದಿಸಲಾಗುತ್ತದೆ. ಪ್ರತಿಯೊಂದು ಪ್ರದೇಶದಲ್ಲೂ ಭೇಲ್ ಪುರಿ ತನ್ನದೇ ಆದ ವಿಶಿಷ್ಟ ವ್ಯತ್ಯಾಸಗಳನ್ನು ಹೊಂದಿದೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ಡ್ಯಾನ್ಸಿಂಗ್ ಭೇಲ್ ಪುರಿ ತಯಾರಿಸುವ ವಿಡಿಯೋ ವೈರಲ್ ಆಗಿದೆ.

ಈ ನಿರ್ದಿಷ್ಟ ಭೇಲ್ ಪುರಿ ಎದ್ದು ಕಾಣುವಂತೆ ಮಾಡಿದ್ದು ಅದಕ್ಕೆ ಹಾಕುವ 60 ವಿಭಿನ್ನ ಪದಾರ್ಥಗಳ ಸಂಯೋಜನೆ ಮಾತ್ರವಲ್ಲದೆ ಅದರ ರಚನೆಯ ವಿಶಿಷ್ಟ ಪ್ರಕ್ರಿಯೆಯಿಂದ. ಭೇಲ್ ಪೂರಿ ತಯಾರಿಸಿದ ಮಾರಾಟಗಾರ ಅದನ್ನು ತಯಾರಿಸುವಾಗ ನೃತ್ಯ ಮಾಡುವ ಮೂಲಕ ಉತ್ಸಾಹ ತೋರಿಸಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಕಮೆಂಟ್ ಗಮನ ಸೆಳೆದಿದೆ. ಈತ ಏನಾದ್ರೂ ಪೈಲಟ್ ಆಗಿದ್ರೆ
ಕೇವಲ 2 ಸೆಕೆಂಡುಗಳ ಕಾಲ ತಿರುಗಿದ್ದರೆ, ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿತ್ತು ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ ಆರಂಭದಲ್ಲಿ ಅವನು ಪಾತ್ರೆ ಸ್ವಚ್ಛಗೊಳಿಸುತ್ತಿದ್ದಾನೆಂದು ನಾನು ಭಾವಿಸಿದೆ ಎಂದಿದ್ದಾರೆ.

ಕೆಲವರು ಭೇಲ್ ಪೂರಿ ತಯಾರಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಭೇಲ್ ಪುರಿಯ ಅರ್ಧಭಾಗ ನೆಲದ ಮೇಲೆ ಬೀಳುತ್ತಿದೆ. ಇದು ಆಹಾರ ವ್ಯರ್ಥ, ಶಕ್ತಿಯ ವ್ಯರ್ಥ ಮತ್ತು ಸಮಯ ವ್ಯರ್ಥ ಎಂದಿದ್ದಾರೆ. ಮತ್ತೊಬ್ಬರು ಮಾರಾಟಗಾರರ ಅನೈರ್ಮಲ್ಯ ಪ್ರಕ್ರಿಯೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಭೇಲ್ ಪೂರಿ ತಯಾರಕನ ಬೆವರು ಕೂಡ ಇವರೊಳಗೆ ಸೇರಿರಬಹುದು ಎಂದಿದ್ದಾರೆ.

https://www.youtube.com/watch?v=fLKRiRgX850&t=4s

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read