ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಲೆಂದು ಕಚೇರಿಯಲ್ಲಿರುವ ಕುರ್ಚಿಗಳನ್ನೇ ಕಿತ್ತೊಗೆದ ಬಾಸ್ ಒಬ್ಬರು ಸುದ್ದಿ ಮಾಡಿದ್ದಾರೆ.
ಸ್ಟೋರ್ ಒಂದರಲ್ಲಿರುವ ಕುರ್ಚಿಗಳನ್ನು ಗ್ರಾಹಕರಿಗೆ ಮಾತ್ರವೇ ಎಂಬ ನಿಯಮ ತಂದಿರುವ ಬಾಸ್ ’ಉದ್ಯೋಗಿಗಳಿಗೆ ಅಲ್ಲ’ ಎಂದು ಆ ಕುರ್ಚಿಗಳ ಮೇಲೆ ಬರೆಯಿಸಿದ್ದಾರೆ. ಬಿಡುವಿನ ಸಮಯದಲ್ಲಿ ಉದ್ಯೋಗಿಗಳು ಕುಳಿತುಕೊಂಡು ಬಿಟ್ಟರೆ ಉತ್ಪಾದಕತೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಈ ಬಾಸ್ ಹೀಗೆ ಮಾಡಿದ್ದಾರೆ.
“ಇಂದು ಕೆಲಸಕ್ಕೆ ಬಂದ ಬಳಿಕ ಕುರ್ಚಿಗಳು ಮಿಸ್ಸಿಂಗ್ ಆಗಿರುವುದು ಕಂಡು ಬಂದಿದೆ. ಗ್ರಾಹಕರಿಗೆ ಇರುವ ಕುರ್ಚಿಗಳು ಇವೆ, ಆದರೆ ಬಿಡುವಿನ ವೇಳೆ ಕಳೆಯುವ ಜಾಗಗಳಲ್ಲಿ ಉದ್ಯೋಗಿಗಳಿಗೆ ಇದ್ದ ಕುರ್ಚಿಗಳು ಮಾತ್ರ ಇಲ್ಲ. ಸ್ಟೋರ್ನ ಹಿಂದೆ ಒಂದು ಕುರ್ಚಿ ಲಭ್ಯವಿದ್ದರೂ ಸಹ ಅದು ಮಾಲೀಕರಿಗೆ ಎಂದು ಅದರ ಹಿಂದೆ ಬರೆಯಲಾಗಿದೆ. ಹೀಗೆ ಮಾಡಿರುವುದು ’ಉತ್ಪಾದಕತೆ ಹೆಚ್ಚಿಸಲಂತೆ’,” ಎಂದು ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿದ್ದಾರೆ ’ಆಂಟಿವರ್ಕ್’ ಹೆಸರಿನ ಪ್ರೊಫೈಲ್ ಬಳಕೆದಾರ.