Viral Video | ಇನ್ಸ್‌ಟಾಗ್ರಾಂನಲ್ಲಿ ಧೂಳೆಬ್ಬಿಸಿದ ಛೋಟಾ ಶಾರುಖ್

ಯಾರನ್ನು ಬೇಕಾದರೂ ಸ್ಟಾರ್‌ ಮಾಡಬಲ್ಲ ಸಾಮರ್ಥ್ಯ ಸಾಮಾಜಿಕ ಜಾಲತಾಣಕ್ಕಿದೆ. ಸಲೆಬ್ರಿಟಿಗಳಂತೆಯೇ ಕಾಣುವ ಅನೇಕ ಮಂದಿ, ಜನಪ್ರಿಯ ನಟರ ನಟನೆ ಹಾಗೂ ಮ್ಯಾನರಿಸಂಗಳ ಅನುಕರಣ ಮಾಡುವ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ.

ಬಾಲಿವುಡ್‌ ನಟ ಶಾರುಖ್ ಖಾನ್‌ರಂತೆಯೇ ಕಾಣುವ ಛೋಟಾ ಶಾರುಖ್ ಖಾನ್ ಇನ್ಸ್‌ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ. ಶಾರುಖ್ ಅಭಿನಯದ ಬಾಜ಼ಿಗರ್‌ ಹಾಗೂ ಡರ್‌ ಚಿತ್ರಗಳಲ್ಲಿ ಅವರ ಪಾತ್ರದ ಅನುಕರಣೆ ಮಾಡುತ್ತಾ ತನ್ನದೇ ಡಬ್‌ಸ್ಮ್ಯಾಶ್ ಮಾಡಿರುವ ಈ ಛೋಟಾ ಶಾರುಖ್ 1,60,000+ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಕೋಲ್ಕತ್ತಾದಲ್ಲಿ ಜನಿಸಿ ಸದ್ಯ ಜಾರ್ಖಂಡ್‌ನಲ್ಲಿರುವ ಇವರು ಶಾರುಖ್‌ರಂತೆಯೇ ಕಾಣುವುದರಿಂದಲೇ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಶಾರುಖ್‌ ಖಾನ್‌ ಚಿತ್ರಗಳ ಅನೇಕ ಹಾಡುಗಳಿಗೆ ಡ್ಯಾನ್ಸ್ ಹಾಗೂ ಅವರ ಅನೇಕ ಡೈಲಾ‌ಗ್‌ಗಳಿಗೆ ಲಿಪ್‌ ಸಿಂಕ್ ಮಾಡುವ ಮೂಲಕ ಭಾರೀ ಖ್ಯಾತಿ ಗಿಟ್ಟಿಸಿದ್ದಾರೆ ಈ ಛೋಟಾ ಶಾರುಖ್.

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read