ಇದು ಆಧುನಿಕ ಜಗತ್ತು, ಅದಕ್ಕೆ ತಕ್ಕಂತೆ ಆಹಾರದಲ್ಲೂ ಬದಲಾವಣೆಯಾಗಿದೆ. ಎಲ್ಲಾ ಕಡೆ ಫಾಸ್ಟ್ ಫುಡ್‌ಗಳ ಆಯ್ಕೆ ಹೆಚ್ಚುತ್ತಿದೆ. ಆರೋಗ್ಯಕರ ತಿನಿಸುಗಳನ್ನು ಬಿಟ್ಟು ಜನರು ಫಾಸ್ಟ್ ಫುಡ್ ಮೊರೆ ಹೋಗುತ್ತಿದ್ದಾರೆ. ಇದರ ಜೊತೆಗೆ ಪ್ರಿಸರ್ವೇಟಿವ್ ಬಳಕೆ ಮಾಡಿರುವ, ಪ್ಯಾಕೆಟ್ ಫುಡ್‌ಗಳ ಬಳಕೆ ಕೂಡ ಜಾಸ್ತಿಯಾಗಿದೆ.
ಇವುಗಳ ಜೊತೆಗೆ ಒತ್ತಡ ಮತ್ತು ಪರಿಸರ ಮಾಲಿನ್ಯದ ಸಂಯೋಜನೆಯು ಜನರನ್ನು ಆರೋಗ್ಯ ಸಮಸ್ಯೆಗಳಿಗೆ ಗುರಿ ಮಾಡುತ್ತಿದೆ. ಶುದ್ಧ ಆಹಾರ ಮತ್ತು ತಾಜಾತನದಿಂದ ಸಮೃದ್ಧವಾಗಿರುವ ತಿನಿಸುಗಳ ಸೇವನೆ ಬಹಳ ಮುಖ್ಯ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಂಪೂರ್ಣ ಫಿಟ್ ಆಗಿರುವುದು ಹೇಗೆ ಎಂಬುದನ್ನು ತಿಳಿದಿರಬೇಕು.
ಹದಿಹರೆಯದವರ ಬೆಳವಣಿಗೆಯೊಂದಿಗೆ ದೇಹದಲ್ಲಿನ ಮೂರು ಪ್ರಮುಖ ವ್ಯವಸ್ಥೆಗಳು ಬದಲಾಗುತ್ತವೆ. ಸ್ನಾಯುಗಳ ಬೆಳವಣಿಗೆ ಮತ್ತು ಬಲವಾದ ಮೂಳೆಗಳ ಬೆಳವಣಿಗೆ, ಹಾರ್ಮೋನುಗಳ ಪರಿಪಕ್ವತೆ ಮತ್ತು ರಕ್ತನಿರೋಧಕ ವ್ಯವಸ್ಥೆ. ಇವುಗಳ ಸರಿಯಾದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸರಿಯಾದ ಪೋಷಣೆಯ ಅಗತ್ಯವಿದೆ.
ಮೂಳೆ ಬೆಳವಣಿಗೆ
ಹೆಚ್ಚಿನ ಜನರು ಮೂಳೆಯ ಬೆಳವಣಿಗೆಯ ಬಗ್ಗೆ ಯೋಚಿಸುವಾಗ ಸಾಕಷ್ಟು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಬಗ್ಗೆ ಯೋಚಿಸುತ್ತಾರೆ, ಆದರೆ ವಿಟಮಿನ್ ಡಿ, ಮೆಗ್ನೀಸಿಯಮ್, ರಂಜಕ, ವಿಟಮಿನ್ ಕೆ, ಕಾಲಜನ್ ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳು ಮೂಳೆಯ ಆರೋಗ್ಯಕ್ಕೆ ಅಗತ್ಯವಾಗಿವೆ. ಈ ಪೋಷಕಾಂಶಗಳ ಸೇವನೆಯು ಹದಿಹರೆಯದವರಿಗೆ ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತ
ಕಬ್ಬಿಣ, ವಿಟಮಿನ್ ಬಿ-12 ಮತ್ತು ಫೋಲೇಟ್ ಆರೋಗ್ಯಕರ ಕೆಂಪು ರಕ್ತ ಕಣಗಳ ರಚನೆಗೆ ಅವಶ್ಯಕವಾಗಿದೆ. ಸಾಕಷ್ಟು ಕಬ್ಬಿಣವಿಲ್ಲದೆ, ಹದಿಹರೆಯದವರು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಅಗತ್ಯವಾದ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಪಾಲಕ್ ಪನೀರ್, ಪಾಲಕ್ ರೈಸ್, ಪಾಲಕ್ ದಾಲ್, ಲೆಂಟಿಲ್ ಸೂಪ್, ಮೇಥಿ ಪರೋಟ ಮತ್ತು ಬೀಟ್‌ರೂಟ್ ಪೊರಿಯಾಲ್ನಂತಹ ಭಕ್ಷ್ಯಗಳನ್ನು ಸೇವನೆ ಮಾಡುವುದರಿಂದ ಈ ಪೋಷಕಾಂಶಗಳು ನಮಗೆ ದೊರೆಯುತ್ತವೆ.
ಹಾರ್ಮೋನುಗಳ ಪರಿಪಕ್ವತೆ
ಸಮತೋಲಿತ ಆಹಾರ, ಸಾಕಷ್ಟು ಪ್ರೋಟೀನ್, ಹೆಚ್ಚಿನ ಫೈಬರ್, ಒತ್ತಡ ಮುಕ್ತ ಜೀವನ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ ಮತ್ತು ಉತ್ತಮ ನಿದ್ರೆ ಹಾರ್ಮೋನ್ ಪರಿಪಕ್ವತೆಗೆ ಅತ್ಯಂತ ಅಗತ್ಯವಾಗಿದೆ. ಇವುಗಳ ಬಗ್ಗೆ ಗಮನಹರಿಸಿದ್ರೆ ಬೇಗನೆ ವೃದ್ಧಾಪ್ಯ ನಿಮ್ಮನ್ನು ಆವರಿಸುವುದಿಲ್ಲ.