ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಎಷ್ಟೇ ಆರ್.ಆರ್. ನಂಬರ್ ಇದ್ರೂ ಒಂದಕ್ಕೆ ಮಾತ್ರ ಫ್ರೀ ವಿದ್ಯುತ್

ಬೆಂಗಳೂರು: ಒಂದು ಆರ್.ಆರ್. ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುವುದು ಎಂದು ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಬಾಡಿಗೆದಾರರು, ಮಾಲೀಕರು ಅಂತಾ ವ್ಯತ್ಯಾಸ ಮಾಡುತ್ತಿಲ್ಲ ಆರ್.ಆರ್. ಸಂಖ್ಯೆಯನ್ನೇ ಸ್ಥಾವರ ಎಂದು ಕರೆಯಲಾಗುತ್ತದೆ. ಯಾರು ಎಷ್ಟೇ ಆರ್.ಆರ್. ಸಂಖ್ಯೆಗಳನ್ನು ಹೊಂದಿರಲಿ. ಒಂದು ಆರ್.ಆರ್. ಸಂಖ್ಯೆ ಮಾತ್ರ ಯೋಜನೆಯ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.

ಆರ್.ಆರ್. ಸಂಖ್ಯೆ ಎಂದರೆ ಬೆಸ್ಕಾಂ ನೀಡುವ ಯೂನಿಕ್ ಐಡಿ ಆಗಿದೆ. ಆರ್.ಆರ್. ಅಂದರೆ ರೆವೆನ್ಯೂ ರಿಜಿಸ್ಟರ್ ನಂಬರ್. ಒಬ್ಬರ ಹೆಸರಲ್ಲಿ ಎಷ್ಟು ಬೇಕಾದರೂ ಆರ್.ಆರ್. ಸಂಖ್ಯೆ ಇರಬಹುದು. ಆದರೆ ಉಚಿತವಾಗಿ ಸಿಗುವುದು ಒಂದು ಆರ್.ಆರ್. ಸಂಖ್ಯೆಗೆ ಮಾತ್ರ. ಒಂದು ಆರ್.ಆರ್. ಸಂಖ್ಯೆಗೆ ಮಾತ್ರ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ ಎಂದರು.

ಯಾರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ಗೊತ್ತಾಗಬೇಕಿದೆ. ಹೀಗಾಗಿ ಉಚಿತ ವಿದ್ಯುತ್ ಯೋಜನೆ ಪಡೆಯಲು ಅರ್ಜಿ ಕೇಳಿದ್ದೇವೆ. ರಾಜ್ಯದಲ್ಲಿ 2.15 ಆರ್.ಆರ್. ನಂಬರ್ ಗಳು ಇವೆ. ಉಚಿತ ವಿದ್ಯುತ್ ಯೋಜನೆಗೆ ಸುಮಾರು 13000 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಬಿಜೆಪಿಯವರ ಕಾಲದಲ್ಲಿಯೇ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read