90 ರ ದಶಕದಲ್ಲಿ ಟಿವಿ ಲೋಕದಲ್ಲಿ ‘ಶಕುನಿ ಮಾಮ’ ಎಂದೇ ಖ್ಯಾತಿಗಳಿಸಿದ್ದ ನಟ ಗೂಫಿ ಪೈಂಟಲ್ ಅವರು ವಯೋಸಹಜ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. 1988 ರಲ್ಲಿ ಬಿ.ಆರ್. ಚೋಪ್ರಾ ನಿರ್ಮಾಣದ ಮಹಾಭಾರತ ಧಾರವಾಹಿಯಲ್ಲಿ ಅವರು ಶಕುನಿ ಪಾತ್ರದಿಂದ ಹೆಸರಾಗಿದ್ದರು. ಗೂಫಿ ಪೈಂಟಲ್ ಅವರ ಸೋದರಳಿಯ ಹಿತೇನ್ ಪೈಂಟಲ್ ಸಾವನ್ನ ದೃಢಪಡಿಸಿದ್ದಾರೆ.
“ದುರದೃಷ್ಟವಶಾತ್, ಅವರು ಇನ್ನಿಲ್ಲ. ಅವರು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಹೃದಯವು ವೈಫಲ್ಯವಾಯಿತು. ಅವರು ನಿದ್ರೆಯಲ್ಲಿ ಶಾಂತಿಯುತವಾಗಿ ನಿಧನರಾದರು” ಎಂದು ಹಿತೇನ್ ತಿಳಿಸಿದರು.
ಗುಫಿ ಪೈಂಟಲ್ ಅವರನ್ನು ಉಪನಗರ ಅಂಧೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಯಿಂದ ಅವರು ದೀರ್ಘಕಾಲದ ಅನಾರೋಗ್ಯಕ್ಕೀಡಾಗಿದ್ದರು. ಅವರು ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಉಪನಗರ ಅಂಧೇರಿಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಗೂಫಿ ಪೈಂಟಲ್ ನಟನೆಯ ಪೈಕಿ 1980 ರ ಹಿಂದಿ ಚಲನಚಿತ್ರಗಳಾದ ಸುಹಾಗ್, ದಿಲ್ಲಗಿ, ಹಾಗೆಯೇ ದೂರದರ್ಶನ ಕಾರ್ಯಕ್ರಮಗಳಾದ CID ಮತ್ತು ಹಲೋ ಇನ್ ಸ್ಪೆಕ್ಟರ್ ಸೇರಿವೆ. BR ಚೋಪ್ರಾ ಅವರ ಮಹಾಭಾರತದ ಶಕುನಿ ಮಾಮಾ ಪಾತ್ರದಲ್ಲಿ ಅವರು ಹೆಚ್ಚು ಖ್ಯಾತಿ ಗಳಿಸಿದರು.