ನವದೆಹಲಿ: ನಿನ್ನೆಯೇ ಬರಬೇಕಿದ್ದ ಮುಂಗಾರು ಮಳೆ ಇನ್ನು 4 ದಿನಗಳ ಕಾಲ ತಡವಾಗಲಿದೆ. ಮುಂಗಾರು ಮಾರುತಗಳು ಮೂರ್ನಾಲ್ಕು ದಿನಗಳ ಕಾಲ ವಿಳಂಬವಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಹಿಂದೆ ಭಾನುವಾರ ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಮಾರುತಗಳ ಆಗಮನವಾಗಿಲ್ಲ. ಇನ್ನು ಮೂರ್ನಾಲ್ಕು ದಿನ ವಿಳಂಬವಾಗಬಹುದು ಎಂದು ಹೇಳಲಾಗಿದೆ.
ಮುಂಗಾರು ಮಾರುತಗಳಿಗೆ ಪೂರಕವಾದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ಮಾರುತ ಚಲನೆ ವೇಗ ಪಡೆದುಕೊಂಡಿದೆ. ಸಮುದ್ರಮಟ್ಟಕ್ಕಿಂತ ಎತ್ತರದವರೆಗೆ ಪೂರ್ವಾಭಿಮುಖವಾಗಿ ಮಾರುತಗಳು ಬೀಸುತ್ತಿವೆ. ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ನಂತರದ ಒಂದೆರಡು ದಿನಗಳೊಳಗೆ ಕರ್ನಾಟಕಕ್ಕೆ ಎಂಟ್ರಿ ಕೊಡಲಿವೆ.