ತ್ವರಿತ ಪರಿಹಾರ ನೀಡುವ ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಎಫ್ ಡಿ ಸಿ) ಔಷಧಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇವುಗಳಲ್ಲಿ ವ್ಯಾಪಕವಾಗಿ ಮಾರಾಟವಾಗುವ ಔಷಧಿಗಳಾದ ಪ್ಯಾರಸಿಟಮಾಲ್ ಮತ್ತು ನಿಮೆಸುಲೈಡ್ ಸಹ ಸೇರಿವೆ. ಈ ಔಷಧಿಗಳು ತ್ವರಿತ ಪರಿಹಾರವನ್ನು ನೀಡುತ್ತವೆ, ಆದರೆ ಅವುಗಳು ಅಪಾಯಕಾರಿ. ತಜ್ಞರ ಸಮಿತಿಯ ಅಭಿಪ್ರಾಯದ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ಈ ಔಷಧಿಗಳನ್ನು ನಿಷೇಧಿಸಿ ಕೇಂದ್ರ ಆರೋಗ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಸರ್ಕಾರ ರಚಿಸಿದ್ದ ತಜ್ಞರ ಸಲಹಾ ಸಮಿತಿಯು ಕಳೆದ ವರ್ಷ ಏಪ್ರಿಲ್‌ನಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಈ ಔಷಧಿಗಳಿಗೆ ವೈದ್ಯಕೀಯ ಸಮರ್ಥನೆ ಇಲ್ಲ ಎಂದು ಹೇಳಲಾಗಿದೆ. ನಿಷೇಧಿತ ಔಷಧಗಳು ಈ ಕೆಳಗಿನಂತಿವೆ.
ಈ ಔಷಧಿಗಳಿಗೆ ನಿರ್ಬಂಧ
ನಿಮೆಸುಲೈಡ್ + ಪ್ಯಾರಸಿಟಮಾಲ್
ಕ್ಲೋರ್ಫೆ ನಿರಾಮೈನ್ + ಕೊಡೈನ್ ಸಿರಪ್
ಫಾಲ್ಕೊಡೈನ್ + ಪ್ರೊಮೆಥಾಜಿನ್
ಅಮೋಕ್ಸಿಲಿನ್ + ಬ್ರೊಮ್ಹೆಕ್ಸಿನ್
ಬ್ರೋಮ್ಹೆಕ್ಸಿನ್ + ಡೆಕ್ಸ್ಟ್ರೋಮೆಥೋರ್ಪಾನ್+ ಅಮೋನಿಯಂ
ಕ್ಲೋರೈಡ್ ಮೆಂಥಾಲ್
ಪ್ಯಾರಸಿಟಮಾಲ್ + ಬ್ರೊಮ್ಹೆಕ್ಸಿನ್ + ಫೆನೈಲ್ಫ್ರಿನ್ + ಕ್ಲೋರ್ಫೆನಿರಮೈನ್ + ಗ್ವೈಫೆನೆಸಿಸ್
ಸಾಲ್ಬುಟಮಾಲ್ + ಕ್ಲೋರ್ಫೆನಿರಾಮೈನ್
ಅಪಾಯಕಾರಿ ಔಷಧಗಳು
ಈ ಔಷಧಿಗಳು ಮನುಷ್ಯರಿಗೆ ಅಪಾಯಕಾರಿ ಎಂದು ತಜ್ಞರ ಸಮಿತಿಯು ತನ್ನ ಸಲಹೆಯಲ್ಲಿ ಹೇಳಿದೆ. ಆದ್ದರಿಂದ ಇವುಗಳ ತಯಾರಿಕೆ, ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವುದು ಅವಶ್ಯಕ. 940 ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಸೆಕ್ಷನ್ 26 ಎ ಅಡಿಯಲ್ಲಿ ಈ ನಿಷೇಧವನ್ನು ವಿಧಿಸಲಾಗಿದೆ.
FDC ಔಷಧಗಳು ಯಾವುವು ?
ಎರಡು ಅಥವಾ ಹೆಚ್ಚಿನ ಔಷಧಗಳನ್ನು ಬೆರೆಸಿ ತಯಾರಿಸಿದ ಔಷಧಗಳಿಗೆ ಎಫ್ ಡಿ ಸಿ ಎಂದು ಕರೆಯಲಾಗುತ್ತದೆ. ಇವುಗಳನ್ನು ಕಾಕ್ಟೈಲ್ ಔಷಧಿಗಳು ಎಂದೂ ಕರೆಯುತ್ತಾರೆ. 2016ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ರಚಿಸಲಾದ ತಜ್ಞರ ಸಮಿತಿಯು ಈ ಔಷಧಗಳನ್ನು ವೈಜ್ಞಾನಿಕ ಮಾಹಿತಿಯಿಲ್ಲದೆ ರೋಗಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದೆ. ಆ ಸಮಯದಲ್ಲಿ ಸರ್ಕಾರವು 344 ಔಷಧ ಸಂಯೋಜನೆಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿತು. ಈಗ ನಿಷೇಧಿತ ಔಷಧಗಳು ಈ ಸಂಯೋಜನೆಯ ಭಾಗವಾಗಿದೆ.