alex Certify ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದು ಮೋದಿಗಾಗಲೀ, ಬಿಜೆಪಿಗಾಗಿಯಲ್ಲ, ಬದಲಾಗಿ…….; ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಮಾಜಿ ಆಲ್‌ರೌಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದು ಮೋದಿಗಾಗಲೀ, ಬಿಜೆಪಿಗಾಗಿಯಲ್ಲ, ಬದಲಾಗಿ…….; ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಮಾಜಿ ಆಲ್‌ರೌಂಡರ್

ಸಾಕ್ಷಿ ಮಲಿಕ್ ಅವರು ರಿಯೊ ಒಲಿಂಪಿಕ್ಸ್ 2016 ರಲ್ಲಿ ಕಂಚು ಗೆದ್ದಿದ್ದು ಪ್ರಧಾನಿ ನರೇಂದ್ರ ಮೋದಿಗಾಗಲೀ ಅಥವಾ ಬಿಜೆಪಿಗಾಗಿಯಲ್ಲ, ಬದಲಾಗಿ ರಾಷ್ಟ್ರಕ್ಕಾಗಿ ಅವರು ಪದಕ ಗೆದ್ದರು. ಆದರೆ ದೇಶಕ್ಕಾಗಿ ಪದಕ ಗೆದ್ದ ಕ್ರೀಡಾಪಟುಗಳ ಹೋರಾಟದ ಬಗ್ಗೆ ಪ್ರಧಾನಿ ಮಾತನಾಡುತ್ತಿಲ್ಲ ಎಂದು ಭಾರತ ಕ್ರಿಕೆಟ್ ಮಾಜಿ ಆಲ್‌ರೌಂಡರ್ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಆರೋಪಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಮೇ 28 ರಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ಆಟಗಾರರನ್ನು ನಿರ್ದಯವಾಗಿ ಎಳೆದಾಡಿದನ್ನು ನೋಡಿದ ನಂತರ ಅವರು ಹಾತಾಶೆಗೊಂಡು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಬಿಡಲು ಮುಂದಾದರು. ಆದರೆ ಆ ಪದಕಗಳು ಅವರದಲ್ಲ, ಬದಲಾಗಿ ರಾಷ್ಟ್ರದ ಹೆಮ್ಮೆ ಎಂದು ಭಾವಿಸಿದಾಗ ಅಂತಿಮವಾಗಿ ನಿರ್ಧಾರದಿಂದ ಹಿಂದೆ ಸರಿದರು ಎಂದರು.

1983ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರಿಗೆ ನಾವು ವಿಶ್ವಕಪ್ ಗೆದ್ದು ಕೊಡಲಿಲ್ಲ. ಜನರು ಈಗಿನ ಪ್ರತಿಭಟನೆಯನ್ನು ರಾಜಕೀಯ ಎಂದು ಹೇಳುವುದು ನನಗೆ ವಿಚಿತ್ರವೆನಿಸುತ್ತದೆ. ಸಾಕ್ಷಿ ಮಲಿಕ್ ಅವರು ರಿಯೊ 2016 ರಲ್ಲಿ ಕಂಚು ಗೆದ್ದಾಗ, ಅವರು ಅದನ್ನು ನರೇಂದ್ರ ಮೋದಿ ಮತ್ತು ಬಿಜೆಪಿಗಾಗಿ ಮಾಡಲಿಲ್ಲ. ಅದನ್ನು ರಾಷ್ಟ್ರಕ್ಕಾಗಿ ಮಾಡಿದರು ಎಂದು ಭಾರತದ ಮಾಜಿ ಆಲ್ ರೌಂಡರ್ ಕೀರ್ತಿ ಆಜಾದ್ ಹೇಳಿದರು.

ಪದಕ ಮತ್ತು ಪದಕ ವಿಜೇತರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮೋದಿ ಎಂದಿಗೂ ಹಿಂಜರಿಯಲಿಲ್ಲ. ಖಟ್ಟರ್ ಅವರು ಸಾಕ್ಷಿಯನ್ನು ಹರಿಯಾಣದಲ್ಲಿ ಬೇಟಿ ಬಚಾವೋ ಮತ್ತು ಬೇಟಿ ಪಡಾವೋ ಬ್ರಾಂಡ್ ಅಂಬಾಸಿಡರ್ ಮಾಡಿದರು. ಆದರೆ ಈಗ ಈ ನಾಯಕರು ಮೌನವಾಗಿದ್ದಾರೆ, ಇಡೀ ವಿಷಯದ ಬಗ್ಗೆ ಒಂದು ಟ್ವೀಟ್ ಕೂಡ ಇಲ್ಲ. ಅಂದು ಅವರು ಸಂತೋಷದಿಂದ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇಂದು ತಮ್ಮನ್ನು ರಕ್ಷಿಸಿಕೊಳ್ಳಲು ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಏಳು ಟೆಸ್ಟ್ ಪಂದ್ಯಗಳನ್ನು ಒಳಗೊಂಡಂತೆ 142 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಕೀರ್ತಿ ಆಜಾದ್, ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸದಿದ್ದಕ್ಕಾಗಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಆರೋಪಗಳಿದ್ದರೂ ಇದುವರೆಗೂ ಬಂಧಿಸಿಲ್ಲವೇಕೆ ಎಂದಿದ್ದಾರೆ.

ಭಾರತೀಯ ಕ್ರಿಕೆಟ್ ದಂತಕಥೆಗಳಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ರೋಜರ್ ಬಿನ್ನಿ ಹೊರತುಪಡಿಸಿ 1983 ರ ವಿಶ್ವಕಪ್ ವಿಜೇತ ತಂಡ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...