ರಾಯಚೂರು : ಕೆರೆಯಲ್ಲಿ (lake) ಮುಳುಗಿ ಚಿಕ್ಕಪ್ಪ, ಮಗ ಇಬ್ಬರು ಮೃತಪಟ್ಟ ಘೋರ ಘಟನೆ ರಾಯಚೂರು ತಾಲೂಕಿನ ಕೂರ್ತಕುಂದಾ ಕೆರೆಯಲ್ಲಿ ನಡೆದಿದೆ.
ಮೃತನನ್ನು ಸಲೀಂ ಹುಸೇನ್ ಸಾಬ್ (32) ಯಾಸೀನ್ ರಫಿ( 13) ಎಂದು ಗುರುತಿಸಲಾಗಿದೆ. ಕೆರೆಯಲ್ಲಿ ನೀರು ತುಂಬಿಕೊಂಡು ಬರಲು ಯಾಸೀನ್ ರಫಿ ಹೋಗಿದ್ದು, ಈ ವೇಳೆ ಕೆರೆಯಲ್ಲಿ (slipped and fell) ಜಾರಿ ಬಿದ್ದಿದ್ದಾನೆ.
ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆ ಹೋಗಿದ್ದ ಚಿಕ್ಕಪ್ಪ ಸಲೀಂ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಮೂಲಕ ಚಿಕ್ಕಪ್ಪ, ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಯಾಪಲದಿನ್ನಿ ಪೊಲೀಸ್ ಠಾಣಾ (police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.