![](https://kannadadunia.com/wp-content/uploads/2023/06/cashew-allergy-1024x682.jpeg)
ಗೋಡಂಬಿ ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಸಾಕಷ್ಟು ಪ್ರೋಟೀನ್ ಇದೆ. ಇದರೊಂದಿಗೆ ಖನಿಜಗಳು ಮತ್ತು ಕಬ್ಬಿಣವೂ ಹೇರಳವಾಗಿದೆ. ಇದಲ್ಲದೆ ಮೆಗ್ನೀಸಿಯಮ್, ಸೆಲೆನಿಯಮ್, ಎಂಟಿ ಒಕ್ಸಿಡೆಂಟ್ಗಳು ಸಹ ಅದರಲ್ಲಿವೆ. ಆದರೆ ಮಿತಿಮೀರಿ ಗೋಡಂಬಿ ತಿನ್ನುವುದು ಹಾನಿಕಾರಕ.
ಯಾವುದೋ ಪಾರ್ಟಿ, ಫಂಕ್ಷನ್ನಲ್ಲಿ, ಸಮಾರಂಭಗಳಲ್ಲಿ ಡ್ರೈ ಫ್ರೂಟ್ಸ್ ಎದುರಿಗಿಟ್ಟಿರುತ್ತಾರೆ. ಮಾತಿನ ಭರದಲ್ಲಿ ನಾವು ಎಷ್ಟು ತಿಂದಿದ್ದೇವೆ ಎಂಬ ಪರಿವೆಯೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಗೋಡಂಬಿಯನ್ನು ಅತಿಯಾಗಿ ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದೇ ದಿನದಲ್ಲಿ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಗೋಡಂಬಿಯನ್ನು ತಿನ್ನುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಹೊಟ್ಟೆನೋವು: ಗೋಡಂಬಿ ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟ. ಇದರಲ್ಲಿರುವ ಕ್ಯಾಲೋರಿಗಳ ಪ್ರಮಾಣವೂ ಅತಿ ಹೆಚ್ಚು. ಗೋಡಂಬಿಯನ್ನು ನಿರಂತರವಾಗಿ ಸೇವಿಸಿದರೆ ಅಜೀರ್ಣದ ಸಮಸ್ಯೆ ಕಾಡಬಹುದು. ಹೊಟ್ಟೆ ನೋವು ಕೂಡ ಬರುವ ಸಾಧ್ಯತೆ ಇರುತ್ತದೆ.
ತೂಕ ಹೆಚ್ಚಳ: ಗೋಡಂಬಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳಿವೆ. ಒಮ್ಮೆಲೇ 3 ರಿಂದ 4 ಗೋಡಂಬಿಗಳನ್ನು ಸೇವಿಸಿದರೆ 163 ಕ್ಯಾಲೋರಿಗಳನ್ನು ಸೇವಿಸಿದಂತೆ. ಜೊತೆಗೆ ಅಪರ್ಯಾಪ್ತ ಕೊಬ್ಬುಗಳು. ತೂಕ ನಷ್ಟಕ್ಕೆ ಶ್ರಮಿಸುತ್ತಿರುವವರು ಗೋಡಂಬಿಯನ್ನು ಕಡಿಮೆ ಸೇವಿಸುವುದು ಉತ್ತಮ.
ಸೋಡಿಯಂ ಹೆಚ್ಚಾಗುವ ಭಯ: ಗೋಡಂಬಿಯಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ನೀವು ಉಪ್ಪುಸಹಿತ ಗೋಡಂಬಿಯನ್ನು ಸೇವಿಸಿದರೆ, ಕೇವಲ 3 ರಿಂದ 4 ಗೋಡಂಬಿ ನಿಮಗೆ 87 ಮಿಲಿ ಗ್ರಾಂ ಸೋಡಿಯಂ ಅನ್ನು ನೀಡುತ್ತದೆ. ಅಧಿಕ ಸೋಡಿಯಂ ಕಾರಣದಿಂದ ರಕ್ತದೊತ್ತಡದ ಜೊತೆಗೆ, ಪಾರ್ಶ್ವವಾಯು, ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ.
ಅಲರ್ಜಿ: ಗೋಡಂಬಿ ಅನೇಕ ಜನರಿಗೆ ಸರಿಹೊಂದುವುದಿಲ್ಲ. ಅಲರ್ಜಿ ಉಂಟಾಗಬಹುದು. ಗೋಡಂಬಿ ತಿಂದ ನಂತರ ದೇಹದಲ್ಲಿ ಬೊಬ್ಬೆಗಳೇಳುವ ಸಾಧ್ಯತೆ ಇರುತ್ತದೆ. ಉಸಿರಾಟದ ತೊಂದರೆ, ವಾಂತಿ, ಬೇಧಿ ಕೂಡ ಉಂಟಾಗಬಹುದು.