
ಮಂಗಳೂರು: ಫಲಿತಾಂಶ ಬಂದ 24 ಗಂಟೆಯಲ್ಲೇ ಗ್ಯಾರಂಟಿ ಯೋಜನೆ ಜಾರಿ ಎಂದು ಹೇಳಿ ಜನರ ಆಕ್ರೋಶದ ನಂತರ ಜಾರಿಗೊಳಿಸಿದ್ದಾರೆ. ಜನಪರ ಯೋಜನೆ ಘೋಷಿಸಿದ್ದು, ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಹಣದ ಮೂಲ ಎಷ್ಟು ವರ್ಷ ಇರುತ್ತದೆ ಎಂದು ಶ್ವೇತ ಪತ್ರ ಹೊರಡಿಸಲಿ. ನಿರುದ್ಯೋಗ ಭತ್ಯೆಗೆ ಮಾನದಂಡ ಹಾಕಿದ್ದಾರೆ. ಮೊದಲಿಗೆ ಈ ಬಗ್ಗೆ ಹೇಳಿರಲಿಲ್ಲ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳು ಸಂಚರಿಸುತ್ತವೆ. ಖಾಸಗಿ ಬಸ್ಗಳಲ್ಲಿ ಸಂಚರಿಸುವವರಿಗೆ ಉಚಿತ ಪ್ರಯಾಣದ ಬಗ್ಗೆ ಏನೂ ಹೇಳಿಲ್ಲ. ಈ ಬಗ್ಗೆ ಹೇಳಲಿ ಎಂದು ತಿಳಿಸಿದ್ದಾರೆ.
ಹಿಂದಿನ ಪಿಂಚಣಿ ಯೋಜನೆಗಳ ಗತಿ ಏನು ಎಂದು ತಿಳಿಸಬೇಕಿದೆ. ಬೊಕ್ಕಸದ ಗತಿ ಏನು? ಹೊರೆ ಆಗದೆ ಹೇಗೆ ನಿಯಂತ್ರಿಸುತ್ತಾರೆ? ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ಕುಸಿತವಾಗಬಾರದು. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ.
ಆದಾಯದ ಮೂಲಗಳನ್ನು ಶ್ವೇತಪತ್ರದ ಮೂಲಕ ಹೊರಡಿಸಬೇಕು. ಇದು ಚುನಾವಣೆ ಗಿಮಿಕ್ ಆಗಬಾರದು. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಯೋಜನೆ ಮಾಡಿದ್ದಾರೆ. ಒಟ್ಟಾರೆ ಜನರಿಗೆ ಹೊರೆಯಾಗದಂತೆ ಯೋಜನೆಗಳು ಜಾರಿಯಾಗಲಿ ಎಂದು ಹೇಳಿದ್ದಾರೆ.