alex Certify 40 ರೂಪಾಯಿಗೇರಿದ ಪ್ರತಿ ಕೆ.ಜಿ. ಟೊಮ್ಯಾಟೋ ಬೆಲೆ; ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40 ರೂಪಾಯಿಗೇರಿದ ಪ್ರತಿ ಕೆ.ಜಿ. ಟೊಮ್ಯಾಟೋ ಬೆಲೆ; ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಸಾಧ್ಯತೆ

ಕಳೆದ ಮೂರು ದಿನಗಳಿಂದ ತಮಿಳುನಾಡು ರಾಜ್ಯಾದ್ಯಂತ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಏರಿಕೆಯಾಗಿದ್ದು ಒಂದು ಕಿಲೋಗ್ರಾಂಗೆ 40 ರೂಪಾಯಿ ದಾಟಿದೆ. ಟೊಮ್ಯಾಟೋ ಅಲಭ್ಯತೆಯಿಂದಾಗಿ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳ ರೈತರು ಈ ಹಿಂದೆ ಟೊಮೇಟೊ ಬೆಲೆ ಕಡಿಮೆ ಇದ್ದ ಕಾರಣದಿಂದ ಟೊಮ್ಯಾಟೋ ಕೃಷಿಯನ್ನು ಕಡಿಮೆ ಮಾಡಿದ್ದಾರೆ ಎಂದು ಕೊಯಂಬೀಡು ಮಾರುಕಟ್ಟೆಯ ವ್ಯಾಪಾರಿಗಳು ತಿಳಿಸಿದ್ದಾರೆ. ಕಡಿಮೆಯಾದ ಟೊಮ್ಯಾಟೋ ಬೇಸಾಯ, ಹವಾಮಾನ ಬದಲಾವಣೆಯಿಂದ ಪೂರೈಕೆಯಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದರು.

ಆಂಧ್ರಪ್ರದೇಶದ ಮದನಪಲ್ಲಿ, ಪುಂಗನೂರು, ಕುಪ್ಪಂ ಹಾಗೂ ಕಳಂನೂರಿ, ಶ್ರೀನಿವಾಸಪುರ, ಕೋಲಾರ, ಚಿಂತಾಮಣಿ ಪ್ರದೇಶಗಳಿಂದ ಕೊಯಂಬೆಡು ಮಾರುಕಟ್ಟೆಗೆ ಟೊಮೇಟೊ ಬರುತ್ತಿದೆ. ಕೃಷ್ಣಗಿರಿ ಜಿಲ್ಲೆಯ ರಾಯಕೋಟ್ಟೈ ಮತ್ತು ವೆಪ್ಪನಪಲ್ಲಿಯಿಂದ ಸ್ವಲ್ಪ ಪೂರೈಕೆ ಇದೆ.

ಮಾರುಕಟ್ಟೆಗೆ ಸಾಮಾನ್ಯವಾಗಿ ಸುಮಾರು 70 ಲಾರಿಗಳು ಬರುತ್ತವೆ, ಅವುಗಳಲ್ಲಿ ಪ್ರತಿಯೊಂದೂ 10 ಟನ್ ಟೊಮೆಟೊಗಳನ್ನು ಹೊಂದಿರುತ್ತದೆ. ಆದರೆ ಈಗ 45ರಿಂದ 50 ಲಾರಿಗಳಿಗೆ ಪೂರೈಕೆ ಇಳಿಕೆಯಾಗಿ ಬೆಲೆ ಏರಿಕೆಯಾಗಿದೆ. ಟೊಮೆಟೊ ಸಗಟು ದರ ಗುಣಮಟ್ಟಕ್ಕೆ ಅನುಗುಣವಾಗಿ 34 ರಿಂದ 40 ರೂ. ಇದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...